ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಲೇಬಲ್‌ ಆಗುವುದು ಹೇಗೆ?

Last Updated 21 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

‘ಆಹಾರಕ್ಕೆ ಧರ್ಮದ ಲೇಬಲ್ಲೇ?’ ಎಂದು ಬಸವರಾಜ ಸಾದರ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಆ. 20) ಪ್ರಶ್ನಿಸಿದ್ದಾರೆ. ಹಿಂದೊಮ್ಮೆ ತಮ್ಮನ್ನು ಭೇಟಿಯಾದ ಅಧಿಕಾರಿಯೊಬ್ಬರು, ಪರಧರ್ಮದವರ ಮನೆಯಲ್ಲಿ ಮಾಡಿದ ಆಹಾರ ಪದಾರ್ಥ ಸೇವಿಸುವುದಿಲ್ಲ ಎಂದಿದ್ದನ್ನು ಪ್ರಸ್ತಾಪಿಸಿದ್ದಾರೆ. ಆ ಅಧಿಕಾರಿ ಹಾಗೆ ಹೇಳಿದ್ದು ಹೇಗೆ ತಪ್ಪಾಗುತ್ತದೆ? ಆಹಾರ ಪದ್ಧತಿಯಲ್ಲಿ ಹಲವು ಬಗೆಗಳಿರುತ್ತವೆ. ತಯಾರಿಸುವ ವಿಧಾನ, ಬಳಸುವ ಪದಾರ್ಥಗಳು ಸಹ ಬೇರೆಯಾಗಿರುತ್ತವೆ. ಕೆಲವರು ಬೆಳ್ಳುಳ್ಳಿ, ಈರುಳ್ಳಿಯನ್ನು ಇಡೀ ಜೀವಮಾನದಲ್ಲಿ ಸೇವಿಸುವುದಿಲ್ಲ. ಹೀಗಾಗಿ, ಅಂತಹವರು ತಮ್ಮ ಮನೆ ಊಟ ಬಿಟ್ಟು ಬೇರೆ ಎಲ್ಲೂ ಆಹಾರ ಸೇವಿಸಲು ಇಚ್ಛಿಸದೇ ಇರಬಹುದು. ಇದನ್ನು ಹೀಗಳೆದರೆ ಹೇಗೆ? ಧರ್ಮದ ಅನುಸಾರ, ಮನೆಯ ಪದ್ಧತಿಯ ಅನುಸಾರ ಕೆಲವು ನಿಯಮಗಳನ್ನು ಪಾಲಿಸಿದರೆ ಅದನ್ನು ಧರ್ಮದ ಲೇಬಲ್ಲಾಗಿ ಕಾಣುವುದು ಸರಿಯೇ?

-ಸ್ಮಿತಾ ಮೈಸೂರ,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT