ಭಾನುವಾರ, ಜೂನ್ 13, 2021
25 °C

ಕೊರೊನಾ ಸೋಂಕಿತರನ್ನು ಅವಮಾನಿಸದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ಯಾವ ಹೊತ್ತಿನಲ್ಲಿ ಯಾರ ಮನೆ ಬಾಗಿಲ ಬಳಿ ಬರುತ್ತದೋ ಗೊತ್ತಿಲ್ಲ. ಆದರೆ ಅದು ಬೀದಿಗಳನ್ನು, ಮನೆಗಳನ್ನು, ಕೋಣೆಗಳನ್ನು ಬದಲಿಸುವಷ್ಟರ ಮಟ್ಟಿಗೆ ಸಂಬಂಧಿಕರು, ನೆರೆಹೊರೆಯವರು, ಗೆಳೆಯರು, ಪ್ರೀತಿಪಾತ್ರರ ನಡುವೆ ಅಂತರ ಸೃಷ್ಟಿಸುತ್ತಿದೆ. ಕೊರೊನಾ ಸೋಂಕು ತಗುಲಿದೆ ಎಂಬ ಕಾರಣಕ್ಕಾಗಿ ಅವರ ಮನಸ್ಸು ಗಾಸಿಗೊಳಿಸುವಂತಹ ಕೆಲಸವನ್ನು ಯಾರೂ ಮಾಡಬೇಡಿ.

ಕೊರೊನಾ ಸೋಂಕಿತರು ಮೊದಲೇ ಭಯ, ಆತಂಕಕ್ಕೆ ಒಳಗಾಗಿರುತ್ತಾರೆ. ಅಂತಹವರನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುವುದು ಸರಿಯಲ್ಲ. ಅಗತ್ಯವಿರುವ ಮನೋಧೈರ್ಯವನ್ನು ಅವರಿಗೆ ನೀಡಿ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿ, ಗೌರವ ಮತ್ತು ಪ್ರೀತಿಯಿಂದ ನೋಡಿಕೊಂಡರೆ ಅವರು ಶೀಘ್ರ ಗುಣಮುಖರಾಗಲು ಅನುವಾಗುತ್ತದೆ.

–ವಿದ್ಯಾಶ್ರೀ ಬಿ., ಬಳ್ಳಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು