ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಟಿಲಗೊಳಿಸುವುದು ಬೇಡ

Last Updated 12 ಸೆಪ್ಟೆಂಬರ್ 2018, 19:59 IST
ಅಕ್ಷರ ಗಾತ್ರ

ಸಲಿಂಗಕಾಮ ನಿಸರ್ಗಕ್ಕೆ ಮತ್ತು ಕಾನೂನಿಗೆ ವಿರುದ್ಧ ಎಂದು ಉಸುರಿದ್ದ ಭಾರತೀಯ ದಂಡಸಂಹಿತೆಯ ಸೆಕ್ಷನ್‌ 377 ಅನ್ನು ರದ್ದುಗೊಳಿಸಿ ಎಲ್‍ಜಿಬಿಟಿ ಸಮುದಾಯಕ್ಕೆ ಲೈಂಗಿಕ ಸ್ವಾತಂತ್ರ್ಯ ನೀಡಿದ ಸುಪ್ರೀಂ ಕೋರ್ಟ್‌ನ ನಡೆ ಸ್ವಾಗತಾರ್ಹ. ತೀರ್ಪು ಹೊರಬಿದ್ದಾಗಿನಿಂದ ಇಲ್ಲಿಯವರೆವಿಗೂ ಅದಕ್ಕೆ ವ್ಯಕ್ತವಾಗಿರುವ ಬಹುಪಾಲು ಪ್ರತಿಕ್ರಿಯೆಗಳು ಸಲಿಂಗಿಗಳ ಪರವಾಗಿಯೇ ಇವೆ ಎಂಬುದು ಜೀವಿಗಳ ನಡುವಿನ ಪ್ರೀತಿಗೆ ಸಿಕ್ಕ ಬೆಂಬಲ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ತೀರ್ಪನ್ನು ಮತ್ತು ಸಲಿಂಗಕಾಮದ ಬಗೆಗಿನ ವಸ್ತುಸ್ಥಿತಿಯನ್ನು ಹೊರಜಗತ್ತಿಗೆ ಸಾರುವ ಭರದಲ್ಲಿ ಸಲಿಂಗಕಾಮವನ್ನು ನಾವು ಮತ್ತಷ್ಟು ಸಂಕೀರ್ಣಗೊಳಿಸುತ್ತಿದ್ದೇವೆ ಎಂದು ಅನಿಸುತ್ತಿದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಂಕಣದ ಮಧ್ಯದಲ್ಲಿ ಗಂಡುಗಳಿಬ್ಬರ ಪರಸ್ಪರ ಆಲಿಂಗನವಿತ್ತು. ದೃಶ್ಯ ಮಾಧ್ಯಮವೊಂದರಲ್ಲಿ ಸಲಿಂಗರತಿಯ ಬಗೆಗಿನ ಕಾರ್ಯಕ್ರಮವೊಂದರ ಪ್ರಸಾರದ ವೇಳೆಯಲ್ಲಿನ ಚಿತ್ರಗಳು ಗಂಡುಗಳ ನಡುವಿನ ಲೈಂಗಿಕತೆಯನ್ನು ಸೂಚಿಸುವುದಾಗಿತ್ತು. ತೀರ್ಪು ಪ್ರಕಟವಾದಂದಿನಿಂದ ಮಾಡಿರುವ ಬಹುಪಾಲು ವರದಿಗಳಲ್ಲಿನ ಚಿತ್ರಗಳು ತೀರ್ಪನ್ನು ಹೆಚ್ಚು ಸಂಭ್ರಮಿಸುತ್ತಿರುವುದು ‘ಗೇ’ಗಳು ಎಂಬಂತೆ ಭಾಸವಾಗುತ್ತಿದ್ದವು.

ಸಲಿಂಗಕಾಮವೆಂದರೆ ಕೇವಲ ಗಂಡು-ಗಂಡುಗಳ ನಡುವಿನ ಲೈಂಗಿಕ ಕ್ರಿಯೆ ಎಂಬ ತಪ್ಪು ಗ್ರಹಿಕೆ ನಮ್ಮಲ್ಲಿ ಹಲವರಿಗೆ ಇನ್ನೂ ಇದೆ. ಇಂತಹ ಚಿತ್ರಗಳನ್ನೇಬಿತ್ತರಿಸುವುದರಿಂದ ಆ ಭಾವನೆ ಇನ್ನೂ ಬಲವಾಗುತ್ತದೆ. ಸಲಿಂಗಕಾಮವು ಲೆಸ್ಬಿಯನ್ಸ್, ಗೇಸ್, ಟ್ರಾನ್ಸ್‌ಜೆಂಡರ್ಸ್ ಮತ್ತು ದ್ವಿಲಿಂಗಕಾಮಿಗಳನ್ನು ಒಳಗೊಂಡಿರುವುದರಿಂದ ಅವರ ಕುರಿತಂತೆ ಮಾಹಿತಿ ಮುಟ್ಟಿಸುವಾಗ ಒಂದು ಲಿಂಗಿಗಳ ಚಿತ್ರ ಪ್ರಕಟಿಸುವುದು ಸಲ್ಲ. ಇಂತಹ ನಡೆ ಸಲಿಂಗಕಾಮವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ.

ಪ್ರದೀಪ್ ಟಿ.ಕೆ., ತಿಮ್ಮೇಗೌಡನದೊಡ್ಡಿ, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT