ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತುಪರಿಸ್ಥಿತಿ ಎಂದರೆ...

Last Updated 29 ಜೂನ್ 2020, 19:30 IST
ಅಕ್ಷರ ಗಾತ್ರ

ತುರ್ತುಪರಿಸ್ಥಿತಿಯನ್ನು ನೆನಪಿಸಿಕೊಂಡು ಎ.ಸೂರ್ಯ ಪ್ರಕಾಶ್‌ ಅವರು ಬರೆದಿರುವ ಲೇಖನ (ಪ್ರ.ವಾ., ಜೂನ್ 25) ಸಕಾಲಿಕವಾಗಿದೆ. ತುರ್ತುಪರಿಸ್ಥಿತಿ ಎಂದರೆ ಚರಿತ್ರೆಯಲ್ಲಿ ಘಟಿಸಿಹೋದ ಸಂಗತಿ ಎಂಬುದಕ್ಕಿಂತ, ಸರ್ವಾಧಿಕಾರ ಲಕ್ಷಣಗಳನ್ನು ಹೊಂದಿರುವ ಹಾಗೂ ಯಾವ ಕ್ಷಣದಲ್ಲೂ ಮರುಕಳಿಸಬಹುದಾದ ಒಂದು ಸ್ಥಿತಿ ಎಂಬ ಗ್ರಹಿಕೆಯನ್ನು ಲೇಖನ ಹೊಂದಿದೆ.

ಹೀಗಾಗಿಯೇ ಆ ‘ಕತೆಯನ್ನು ಮತ್ತೆ ಮತ್ತೆ ಹೇಳಬೇಕಾಗಿದೆ’ ಎಂದು ಅವರು ಹೇಳಿದ್ದಾರೆ. ಈ ಸ್ಥಿತಿಯ ಲಕ್ಷಣಗಳೆಂದರೆ- ರಾಜಕೀಯ ವಿರೋಧಿಗಳನ್ನು ದಮನಿಸುವುದು, ತಮ್ಮ ನಿಯಂತ್ರಣದಲ್ಲಿರುವ ಸಂಸತ್ತನ್ನು ಬಳಸಿಕೊಂಡು ನ್ಯಾಯಾಂಗ ಹಾಗೂ ಮಾಧ್ಯಮದ ಸ್ವಾತಂತ್ರ್ಯವನ್ನು ಹೊಸಕುವುದು, ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬುಡಮೇಲು ಮಾಡುವುದು, ಪೊಲೀಸ್‌ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡುವುದು, ಮುಖ್ಯ ನಿರ್ಧಾರಗಳು ಪ್ರಧಾನಿಯವರ ನಿವಾಸದಲ್ಲಿ ರೂಪುಗೊಳ್ಳುವುದು ಹಾಗೂ ಪ್ರಜಾತಂತ್ರವನ್ನು ನಾಶ ಮಾಡಿದ ಅರಿವಿದ್ದರೂ ಕ್ಷಮೆ ಕೇಳದಿರುವುದೇ ಆಗಿದೆ.

-ಯಮುನಾ ಗಾಂವ್ಕರ್, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT