ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಭಾಷೆಯನ್ನು ಹಂಗಿಸಿಲ್ಲ

Last Updated 9 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕಲಬುರ್ಗಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಿ ಪಟ್ಟ ಕಟ್ಟುವ ಬದಲು, ಇಂಗ್ಲಿಷನ್ನು ದ್ವೇಷಿಸಿ ಹೊರಕ್ಕೆ ಹಾಕುವ ಹುನ್ನಾರವೇ ಕಂಡಿದ್ದಾಗಿ ಸ್ವಾಮಿ ಕೇಶವ್ ಜಿ. ಬರೆದಿದ್ದಾರೆ (ವಾ.ವಾ., ಫೆ. 7). ಅವರಿಗೆ ಇಂಗ್ಲಿಷ್ ಭಾಷೆಯ ಬಗ್ಗೆ ಪ್ರೀತಿಯೂ ಕನ್ನಡದ ಬಗ್ಗೆ ತಾತ್ಸಾರವೂ ಇರುವುದು ಈ ಹೇಳಿಕೆಯಲ್ಲಿ ಎದ್ದು ಕಾಣುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರನ್ನೂ ಒಳಗೊಂಡಂತೆ ಯಾರೂ ಇಂಗ್ಲಿಷ್ ಭಾಷೆಯನ್ನು ಕೀಳ್ಗಳೆದು ಮಾತನಾಡಿಲ್ಲ. ಅದೊಂದು ಕನ್ನಡ ನುಡಿ ಜಾತ್ರೆ. ಆ ಜಾತ್ರೆಯಲ್ಲಿ ಕನ್ನಡ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದ ಅನಿವಾರ್ಯದ ಬಗ್ಗೆ ಸರ್ಕಾರದ ಗಮನ ಸೆಳೆದರೆ ಅದು ಇಂಗ್ಲಿಷ್ ಭಾಷೆಯನ್ನು ಹೀಗಳೆದಂತೆ ಹೇಗೆ ಆಗುತ್ತದೆ?

ಭಾಷಾವಾರು ಪ್ರಾಂತ್ಯ ರಚನೆಯ ಮೂಲ ಆಶಯವೇ ಆಯಾ ಪ್ರದೇಶದ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು. ಆ ದಿಸೆಯಲ್ಲಿ ಮಾತನಾಡಿದರೆ, ಅದು ಇಂಗ್ಲಿಷ್ ದ್ವೇಷದ ಹಾಗೆ ಅನ್ನಿಸುವುದು ವಿಚಿತ್ರವಾಗಿದೆ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT