ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕ್ಯಾಲೆಂಡರ್‌ಗೆ ‘ದಯಾಮರಣ’

Last Updated 4 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಮುಂಬೈ ಮೂಲದ ಸಾರ್ವಜನಿಕ ಬ್ಯಾಂಕುಗಳ ಕರ್ನಾಟಕ ಶಾಖೆಗಳಲ್ಲಿ ಕನ್ನಡ ಹಿಂದಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕರ್ನಾಟಕ ಮೂಲದ ಬ್ಯಾಂಕುಗಳಲ್ಲೂ ಕನ್ನಡ ಮಾಯವಾಗಿ ಹಲವು ವರ್ಷ ಕಳೆದಿದೆ. ಇದಕ್ಕೆ ಪೂರಕವಾಗಿ ಈ ವರ್ಷ ಈ ಬ್ಯಾಂಕುಗಳಲ್ಲಿ ಕನ್ನಡ ಭಾಷೆಯ ಕ್ಯಾಲೆಂಡರ್‌ಗಳಿಗೂ ದಯಾಮರಣ ಕಲ್ಪಿಸಲಾಗಿದೆ.

ರಾಜ್ಯ ಸರ್ಕಾರ ಘೋಷಿಸುವ ರಜೆ ಮತ್ತು ಸ್ಥಳೀಯ ಹಬ್ಬ ಹುಣ್ಣಿಮೆಗಳ ವಿವರ ಇರುವ ಸಣ್ಣ ಗಾತ್ರದ ಕ್ಯಾಲೆಂಡರ್‌ಗಳನ್ನು ಕರ್ನಾಟಕ ಮೂಲದ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಹಂಚುತ್ತಿದ್ದವು. ಆದರೆ, ಈ ವರ್ಷ ಈ ಬ್ಯಾಂಕುಗಳಲ್ಲಿ ಕೇವಲ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಕ್ಯಾಲೆಂಡರ್‌ಗಳನ್ನು ಮುದ್ರಿಸಲಾಗಿದೆ. ಅದೂ ಕೆಲವೇ ಗ್ರಾಹಕರಿಗೆ ಮೀಸಲು. ಖರ್ಚು ಉಳಿಸುವುದಕ್ಕಾಗಿ ಈ ವರ್ಷ ಕನ್ನಡ ಕ್ಯಾಲೆಂಡರ್‌ ಮುದ್ರಿಸಿಲ್ಲ ಎಂಬ ವಿವರಣೆ ಬ್ಯಾಂಕಿನವರದ್ದು. ತಮ್ಮ ನೆಚ್ಚಿನ ನಾಯಕರ ಕನ್ನಡ ಸಿನಿಮಾ ಬಿಡುಗಡೆ ಆದಾಗ ಬೃಹತ್ ಕಟೌಟ್‌ಗಳನ್ನು ನಿಲ್ಲಿಸಿ ಅದಕ್ಕೆ ಹಾಲು ಎರೆದು ಪೋಲು ಮಾಡುವುದನ್ನೇ ಕನ್ನಡ ಅಭಿಮಾನ ಎಂದು ಈಗ ತಿಳಿದಿರುವ ನಮ್ಮ ನಾಡಿನಲ್ಲಿ, ಬ್ಯಾಂಕುಗಳಲ್ಲಿ ಕನ್ನಡ ಉಳಿಸುವ ಸಲುವಾಗಿ ಹೋರಾಡಲು ಯಾರಿದ್ದಾರೆ?

-ಅನಿಲ್ ಕುಮಾರ್ ಪೂಜಾರಿ,ಅಳಕೆ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT