ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರೈತನ ಅಗತ್ಯಗಳಿಗೆ ಸಿಗಲಿ ಆದ್ಯತೆ

Last Updated 7 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್‌) ಮೂರು ದಿನ ನಡೆದರೆ, ಕೃಷಿ ಮೇಳ ನಾಲ್ಕು ದಿನ ಸಾಗಿತು. ಇವು ಮುಗಿದ ನಂತರ ಸಂಘಟಕರು ನೀಡಿದ ಹೇಳಿಕೆಗಳನ್ನು ನೋಡಿದಾಗ ತತ್‌ಕ್ಷಣಕ್ಕೆ ಆಶಾದಾಯಕ ಎನಿಸಿದರೂ, ಅನುಷ್ಠಾನವು ಕಾಲಬದ್ಧ ರೀತಿಯಲ್ಲಿ ನಡೆದೀತೆ ಎಂಬ ಅನುಮಾನ ಮೂಡುತ್ತದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ‘ಮುಂದಿನ ದಿನಗಳಲ್ಲಿ ಕೃಷಿಕರ ಹೊಲಗಳಲ್ಲಿ ಸಂಶೋಧನೆ’ ಎಂದರೆ, ‘ಜಿಮ್‌ನಲ್ಲಿ ನಡೆದಿರುವ ಒಪ್ಪಂದಗಳ ಅನುಷ್ಠಾನ ಮೂರು ತಿಂಗಳಲ್ಲಿ ಆರಂಭ’ ಎಂದಿದ್ದಾರೆ ಮುಖ್ಯಮಂತ್ರಿ. ಉದ್ಯಮಗಳು ಬರಲು ಲ್ಯಾಂಡ್ ಬ್ಯಾಂಕ್ ಒಂದೇ ಸಾಲದು. ರಾಷ್ಟ್ರೀಯ ಹೆದ್ದಾರಿ ಸಂಪರ್ಕ, ವಿಮಾನ ನಿಲ್ದಾಣಗಳು ಪೂರಕ ಸೌಕರ್ಯಗಳು ಅಷ್ಟೆ. ಉತ್ಪಾದನೆ ಸತತವಾಗಿ ನಡೆಯಲು ಬೇರೆ ಸೌಲಭ್ಯಗಳು ದೊರೆಯುವಲ್ಲಿ ತಡ ಆಗಬಾರದು.

ಕೃಷಿಕರ ಹೊಲಗಳಲ್ಲಿ ಈಗಾಗಲೇ ಕ್ಷೇತ್ರೋತ್ಸವ, ಪ್ರಾಯೋಜಿತ/ಪೈಲಟ್ ಪ್ರಯೋಗಗಳು ನಡೆದಿವೆ. ರೈತನ ದೃಷ್ಟಿ ಯಿಂದ ತುಂಬ ಅಗತ್ಯ ಅನಿಸಿದ ವಿಷಯಕ್ಕೆ ಆದ್ಯತೆ ಸಿಗಬೇಕಷ್ಟೆ. ‘ಸಂಶೋಧನೆಗಾಗಿ ಸಂಶೋಧನೆ’ ಅಲ್ಲ, ಕೆಲವು ಕ್ಷೇತ್ರಮಟ್ಟದ ಸಮಸ್ಯೆಗಳಾದರೂ ಪರಿಹಾರ ಆಗಬೇಕು. ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ, ಅವುಗಳ ಉಪಯುಕ್ತತೆಯ ಬಗೆಗೆ ಹತ್ತು ವರ್ಷಗಳ ನಂತರವಾದರೂ ಸಮಗ್ರ ಸ್ವತಂತ್ರ ಅಧ್ಯಯನಗಳು ನಡೆಯುತ್ತಿಲ್ಲ. ಒಟ್ಟಿನಲ್ಲಿ ಸರ್ಕಾರದ ಚಿಂತನಾಕ್ರಮದಲ್ಲೇ ಬದಲಾವಣೆ ಬರಬೇಕಿದೆ. ಅನುದಾನ, ಸೌಲಭ್ಯ ಪಡೆಯುವ ಸಂಸ್ಥೆಗಳು ಆಗ ಸಮುದಾಯಕ್ಕೆ ಹೆಚ್ಚು ಉತ್ತರದಾಯಿ ಆಗಬಲ್ಲವು.

–ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT