ಶುಕ್ರವಾರ, ನವೆಂಬರ್ 27, 2020
20 °C

ವಾಚಕರ ವಾಣಿ: ಅನಗತ್ಯ ಉತ್ಪಾದನೆಯಿಂದ ಸಂಪನ್ಮೂಲ ಅಪವ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಚ್ಚಿನ ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಾರೆ. ಆದರೆ ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ ತನ್ನ ಕೃಷಿ ಉತ್ಪನ್ನಗಳ ಮೌಲ್ಯ ನಿರ್ಧರಿಸುವ ಸಕಲ ಅಧಿಕಾರ ರೈತನದ್ದೇ ಆಗಿರುತ್ತದೆ. ಜೊತೆಗೆ, ನಿರ್ಧರಿಸಲಾಗದ ಅಸಹಾಯಕತನ ಸಹಾ ಆತನದ್ದೇ. ರೈತನು ಬೇಡಿಕೆ- ಪೂರೈಕೆಗಳ ಸರಳ ತಿಳಿವಳಿಕೆ ಇಲ್ಲದವನೇನೂ ಅಲ್ಲ. ಶೀಘ್ರವಾಗಿ ಸಂಪತ್ತು ಪಡೆಯಬೇಕು, ಇಡೀ ರೈತ ಸಮುದಾಯಕ್ಕೆ ಸಿಗಬಹುದಾದ ಲಾಭದ ಸಿಂಹಪಾಲು ತನಗೇ ದಕ್ಕಬೇಕು, ಮಳೆಹಾನಿ, ಬರ, ಬೆಳೆಹಾನಿ ಎಂಬ ಕಾರಣದಿಂದ ಸರ್ಕಾರ ಆರ್ಥಿಕವಾಗಿ ಸದಾ ತನ್ನ ಬೆಂಗಾವಲಿಗೆ ನಿಲ್ಲಬೇಕೆಂಬ ಪರಾವಲಂಬಿ ಮನಃಸ್ಥಿತಿ, ತನ್ನ ಕುರಿತು ನಿಜ ಕಾಳಜಿ ಇಲ್ಲದವರ ಮೇಲೆ ನಾಯಕತ್ವಕ್ಕಾಗಿನ ಅವಲಂಬನೆ... ಹೀಗೆ ಹತ್ತಾರು ಕಾರಣಗಳು ರೈತನ ಇಂದಿನ ದುಃಸ್ಥಿತಿಯ ಹಿಂದೆ ಇವೆ.

ರೈತ ಬಂಧುಗಳು ಮಾರುಕಟ್ಟೆಯ ಬೇಡಿಕೆಯ ಶೇ 85ರಷ್ಟು ಆಹಾರ ಪದಾರ್ಥಗಳನ್ನು ಮಾತ್ರ ಬೆಳೆಯಬೇಕು. ತಮ್ಮ ಕೃಷಿ ಭೂಮಿಗೆ ನಿಯಮಿತವಾಗಿ ವಿಶ್ರಾಂತಿ ನೀಡಬೇಕು. ಆಗ ಮುಂದಿನ ಬೆಳೆಗೆ ಭೂಮಿಯೂ ಸಡಗರದಿಂದ ಸಜ್ಜುಗೊಳ್ಳುತ್ತದೆ. ಇದರಿಂದ ಬೀಜ, ಗೊಬ್ಬರ, ನೀರು, ಔಷಧಿ, ಸಮಯ ಹಾಗೂ ಶ್ರಮ ಉಳಿತಾಯವಾಗುತ್ತದೆ. ಜೊತೆಗೆ ಉತ್ಪಾದನಾ ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಅಗತ್ಯ ಮೀರಿದ ಉತ್ಪಾದನೆಯಿಂದ ಆಗುವ ಸಂಪನ್ಮೂಲಗಳ ಅಪವ್ಯಯವನ್ನು ತಪ್ಪಿಸಬಹುದು. ಮಾರುಕಟ್ಟೆಯ ನಿಯಂತ್ರಣ ರೈತರ ಹಿಡಿತದಲ್ಲಿರುತ್ತದೆ. ಕೃಷಿಕರ ಶ್ರಮದ ಉತ್ಪಾದನೆಗೆ ನ್ಯಾಯವಾದ ಬೆಲೆ ಸಿಗುತ್ತದೆ. ಅಗತ್ಯವಿರುವವರು ರೈತರು ಹೇಳಿದ ನ್ಯಾಯಸಮ್ಮತವಾದ ಬೆಲೆ ಕೊಟ್ಟು ಖರೀದಿಸುತ್ತಾರೆ.

–ಧನಂಜಯ ಜೀವಾಳ, ಮೂಡಿಗೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು