ಭಾನುವಾರ, ಜನವರಿ 19, 2020
27 °C

ಪ್ರವಾಹ ಪರಿಹಾರ: ವಿಳಂಬದಿಂದ ಪ್ರಯೋಜನವಿಲ್ಲ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಪ್ರವಾಹದಿಂದ ₹ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಕೇಂದ್ರ ಸರ್ಕಾರ ಈವರೆಗೆ ₹3,069 ಕೋಟಿ ಪರಿಹಾರ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಬೇಸರದ ಸಂಗತಿ.

ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿ ಇರುವುದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಇತ್ತು. ಆದರೆ, ಈಗ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೂ ರಾಜ್ಯಕ್ಕೆ ಅನ್ಯಾಯವಾಗುವುದು ತಪ್ಪಿಲ್ಲ.

ವಿಪತ್ತುಗಳಿಂದ ಉಂಟಾಗುವ ನಷ್ಟವನ್ನು ಲೆಕ್ಕ ಹಾಕಲು ಕೇಂದ್ರ ಮತ್ತು ರಾಜ್ಯ ಪ್ರತಿನಿಧಿಗಳ ಜಂಟಿ ಸಮಿತಿ ರಚಿಸಬೇಕು. ಪರಿಹಾರವನ್ನು ಕಾಲಮಿತಿಯಲ್ಲಿ ನೀಡುವಂತಾಗಬೇಕು. ಕೇಂದ್ರದಿಂದ ಸಂಪೂರ್ಣ ಪರಿಹಾರ ಬಿಡುಗಡೆಯಾಗುವಷ್ಟರಲ್ಲಿ ಮತ್ತೊಂದು ಮಳೆಗಾಲ ಹೊಸ್ತಿಲಲ್ಲಿ ಇರುತ್ತದೆ ಎನ್ನುವುದಾದರೆ, ಅದರಿಂದ ಪ್ರಯೋಜನವಾದರೂ ಏನು?

ದರ್ಶನ್, ದೇವಿಕೆರೆ ಹೊಸೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು