ಸೋಮವಾರ, ಆಗಸ್ಟ್ 8, 2022
22 °C

ಗೌರಿ ಲಂಕೇಶ್‌ ಡ್ರಗ್ಸ್‌ ಮೂಲದ ಮಾಹಿತಿ ಕೊಡಿ, ತನಿಖೆಗೆ ಸಹಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪತ್ರಕರ್ತೆ ಗೌರಿ ಲಂಕೇಶ್ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಪಾಕಿಸ್ತಾನದಿಂದ ಡ್ರಗ್ಸ್ ಸರಬರಾಜು ಆಗುತ್ತಿತ್ತು. ಈ ಬಗ್ಗೆ ನಾವು ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದೆವು. ಅಷ್ಟೊತ್ತಿಗೆ ಅವರು ಮೃತಪಟ್ಟ ಕಾರಣ ಸುಮ್ಮನಾದೆವು’ ಎಂದು ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ (ಪ್ರ.ವಾ., ಸೆ. 10).

ಈ ವಿಷಯ ತುಂಬಾ ಗಂಭೀರವಾದುದು. ಅವರು ಇಷ್ಟು ದಿನ ಸುಮ್ಮನಿದ್ದದ್ದೇ ಆಶ್ಚರ್ಯ! ಅದೂ ಪಾಕಿಸ್ತಾನದಿಂದ ಸರಬರಾಜು ಆದ ಬಗ್ಗೆ ತನಿಖಾ ಸಂಸ್ಥೆ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಅವರು ಮಾಹಿತಿ ಕೊಡಬಹುದಿತ್ತು. ಅದನ್ನು ಏಕೆ ಮಾಡಲಿಲ್ಲ? ಈಗಲೂ ಕಾಲ ಮಿಂಚಿಲ್ಲ, ಮಾಹಿತಿ ಕೊಡಲಿ, ತನಿಖೆಗೆ ಸಹಕರಿಸಲಿ.

- ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು