ಶನಿವಾರ, ಜನವರಿ 23, 2021
27 °C

ವಾಚಕರ ವಾಣಿ: ಯುವಜನರ ಉದ್ಯೋಗಕ್ಕೆ ಕುತ್ತು ಬಾರದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಕಂದಾಯ ಇಲಾಖೆಯ ನಿವೃತ್ತರ ಸೇವೆಯನ್ನು ಪಡೆಯಲು ಮುಂದಾಗಿದೆ (ಪ್ರ.ವಾ., ಜ. 3). ಎರಡೆರಡು ಪದವಿಗಳನ್ನು ಪಡೆದಿದ್ದರೂ ಕೆಲಸವಿಲ್ಲದೆ ಯುವಜನರು ಪರಿತಪಿಸುತ್ತಿರುವಾಗ, ನಿವೃತ್ತಿ ಹೊಂದಿರುವವರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡರೆ ಹೇಗೆ? ನಿವೃತ್ತಿ ಆದವರಿಗೆ ವಯಸ್ಸಾಗಿರುತ್ತದೆ, ಅಲ್ಲದೆ ಅವರ ಜೀವನ ನಿರ್ವಹಣೆಗೆ ಪಿಂಚಣಿ ಬರುತ್ತಿರುತ್ತದೆ. ಹಾಗಿದ್ದರೆ ನಿರುದ್ಯೋಗಿ ಯುವಜನರು ಉದ್ಯೋಗಕ್ಕೆ ಏನು ಮಾಡಬೇಕು? ಗುತ್ತಿಗೆ ಆಧಾರದಲ್ಲಿ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತೆಗೆದುಕೊಳ್ಳದಂತೆ ನಿಯಮ ರೂಪಿಸಿ, ಆ ಮೂಲಕ ಯುವಜನರಿಗೆ ಉದ್ಯೋಗ ಒದಗಿಸಲು ಸರ್ಕಾರ ನೆರವಾಗಬೇಕು.

ಉತ್ತಮ ಆಡಳಿತ ವ್ಯವಸ್ಥೆಯನ್ನು ತರುವುದಕ್ಕೆ ಪೂರಕವಾಗಿ, ನಿವೃತ್ತ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿಕೊಂಡು, ಅವರಿಂದ ಸಲಹೆ– ಸೂಚನೆಗಳನ್ನು ಪಡೆದುಕೊಳ್ಳಬಹುದು.

–ಗೌಡಯ್ಯ, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು