ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗದರ್ಶನ ಉಪಯುಕ್ತ

Last Updated 31 ಅಕ್ಟೋಬರ್ 2018, 17:56 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯ ಎರಡು ವಿಶೇಷ ವರದಿಗಳ (ಅ. 29) ಬಗೆಗೆ ಒಂದು ಪ್ರತಿಕ್ರಿಯೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಪ್ರತಿವರ್ಷ ಏರ್ಪಡಿಸುವ ಕೃಷಿ ಮೇಳ ಸಂದರ್ಭದಲ್ಲಿ ‘ಬರ ಆಗಾಗ ಸಂಭವಿಸುತ್ತಿರುತ್ತದೆ’ ಎಂಬ ವಿಷಯ ಪ್ರಸ್ತಾಪಕ್ಕೆ ಬರುತ್ತಿರುತ್ತದೆ.

ಬರಪೀಡಿತ ತಾಲ್ಲೂಕುಗಳಲ್ಲೊಂದರವನಾಗಿ ಹಾಗೂ ಆ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿ ನನಗನಿಸುವುದು- ಮೇಳ ನಡೆಸುವುದರ ಬದಲು ಕೃಷಿಯ ವಿವಿಧ ವಿಷಯಗಳ ಬಗೆಗಿನ ಅಧ್ಯಾಪಕರು ತಮ್ಮ ವ್ಯಾಪ್ತಿಯಲ್ಲಿನ ಜಿಲ್ಲೆಗಳ ಹಳ್ಳಿಗಳಿಗೆ ಹೋಗಿ ರೈತರು ಮಳೆ ಕೊರತೆ ಅಥವಾ ವೈಫಲ್ಯಕ್ಕೆ ಪ್ರತಿಯಾಗಿ ಯಾವ ಬೆಳೆ ಬೆಳೆದಿದ್ದಾರೆ, ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ ಮುಂದಿನ ಮುಂಗಾರುವರೆಗಿನ ಅವಧಿಯ ಬಗೆಗೆ ಸಲಹೆ, ಮಾರ್ಗದರ್ಶನ ನೀಡುವುದು ಉಪಯುಕ್ತವಾದೀತು.

ಕೃಷಿ ಇಲಾಖೆ ಈ ಮೇಳಕ್ಕೆ ವಿವಿಧ ಜಿಲ್ಲೆ– ತಾಲ್ಲೂಕುಗಳಿಂದ ರೈತರನ್ನು ಕರೆತರಲು ಯತ್ನಿಸುವುದಕ್ಕಿಂತ ತಾನು ಕೈಗೊಂಡಿರುವ ಬೆಳೆ ಸಮೀಕ್ಷೆ ಇತ್ಯಾದಿ ಕೆಲಸ ಪೂರೈಸಿ, ಕನಿಷ್ಠ ಪಹಣಿಗಳಲ್ಲಿ ಬೆಳೆಗಳ ಹೆಸರು ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು. ಭಾಷಣ, ಸನ್ಮಾನ, ವಿಚಾರಗೋಷ್ಠಿ, ಪ್ರದರ್ಶನ ಇವುಗಳಿಗಿಂತ ಮೇಲಿನ ಎರಡು ಕೆಲಸಗಳು ಹೆಚ್ಚು ಪರಿಣಾಮಕಾರಿ.

ಎಚ್.ಎಸ್. ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT