ಮಂಗಳವಾರ, ಅಕ್ಟೋಬರ್ 22, 2019
21 °C

ಇಷ್ಟು ವರ್ಷ ಇಲ್ಲದ್ದು, ಈಗೇಕೆ?

Published:
Updated:

ಹಿಂದಿ ಹೇರಿಕೆಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ‘ಅವಾಸ್ತವಿಕ ಭಾಷಾವೇಶ’ ಎಂದು ಡಿ.ಎ.ಶಂಕರ್ ಅವರು ಕರೆದಿರುವುದು (ಸಂಗತ, ಸೆ. 26) ಅಸಮಂಜಸವಾಗಿದೆ. ಅವರಿಗೆ ಉತ್ತರ ಭಾರತದಲ್ಲಿ ಆದ ಭಾಷೆಯ ತೊಡಕಿನ ಅನುಭವ ನನಗೆ ದಕ್ಷಿಣ ಭಾರತದಲ್ಲಿ ಆಗಿದೆ. ಕೇರಳ- ತಮಿಳುನಾಡು ಪ್ರವಾಸಕ್ಕೆ ಹೋದಾಗಲೆಲ್ಲಾ ಸಂವಹನದ ತೊಂದರೆ ಅನುಭವಿಸಿದ್ದೇನೆ.

ಹಿಂದಿ ಹೇರಿಕೆಯ ವಿರುದ್ಧ ನಮ್ಮ ಆಕ್ರೋಶ ಸಕಾರಣವಾದದ್ದು. ರಾಷ್ಟ್ರಭಾಷೆಯಾಗಿ ಇಷ್ಟು ವರ್ಷ ಇರದ ಹಿಂದಿಯ ಅವಶ್ಯಕತೆ ಈಗ ಎಲ್ಲಿಂದ ಉದ್ಭವವಾಯಿತು? ಭಾರತೀಯರೆಲ್ಲಾ ತಮಗೆ ಅತ್ಯವಶ್ಯಕ ಎನಿಸಿದಾಗ ಮಾತೃಭಾಷೆಯನ್ನು ಹೊರತುಪಡಿಸಿ ಇತರ ಭಾರತೀಯ ಭಾಷೆಗಳನ್ನು (ಹಿಂದಿ ಸಮೇತ) ಕಲಿತು ವ್ಯವಹರಿಸುತ್ತಿದ್ದಾರೆ. ಕರ್ನಾಟಕದಲ್ಲಿರುವ ಪಂಜಾಬಿ, ಮಾರ್ವಾಡಿ ಜನ, ವ್ಯಾಪಾರ- ವ್ಯವಹಾರದಲ್ಲಿ ಕನ್ನಡ ಬಳಸುವ ಉದಾಹರಣೆ ನಮ್ಮ ಮುಂದಿದೆ.

ಹಿಂದಿಯನ್ನು ಎಲ್ಲರೂ ಕಲಿಯಬೇಕು ಎನ್ನುವುದು ಭಾಷಾ ಹೇರಿಕೆಯೇ ಸರಿ. ತ್ರಿಭಾಷಾ ಸೂತ್ರದಡಿ ಹಿಂದಿಯೇತರರು ಹಿಂದಿ ಕಲಿಯುವಂತೆ, ಹಿಂದಿ ಭಾಷಿಕರು ಯಾವ ಭಾಷೆ ಕಲಿಯುತ್ತಾರೆ? ಹಿಂದಿ ಭಾಷೆ ಕಲಿಯಬೇಕೆನ್ನುವ ಫರ್ಮಾನಿನ ಹಿಂದಿರುವ ದುರುದ್ದೇಶ ಅರಿಯಲಾರದಷ್ಟು ಮುಗ್ಧರಲ್ಲ ಕನ್ನಡಿಗರು.

-ಮಧು, ಹುಬ್ಬಳ್ಳಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)