ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಕಾಯಲು ತೋಳಗಳ ನೇಮಕ!

Last Updated 2 ಆಗಸ್ಟ್ 2021, 17:21 IST
ಅಕ್ಷರ ಗಾತ್ರ

ಬೆಂಬಲ ಬೆಲೆ ಯೋಜನೆ (ಎಂಎಸ್‌ಪಿ) ಅಡಿ ಖರೀದಿಸಿ ದಾಸ್ತಾನು ಮಾಡಿದ್ದ ಭತ್ತವು ಗಿರಣಿಗಳಿಂದಲೇ ನಾಪತ್ತೆ ಆಗಿರುವ ಸುದ್ದಿ (ಪ್ರ.ವಾ., ಆ. 2) ತಿಳಿದು ಅಚ್ಚರಿಯಾಯಿತು. ಇದು ಅಧಿಕಾರಿಗಳ ಕಾರ್ಯದಕ್ಷತೆಯ ಕೊರತೆಯನ್ನು, ಕಳ್ಳಕಾಕರ ಹಸ್ತ ಎಷ್ಟು ಬೃಹತ್ತಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. 22,285 ಕ್ವಿಂಟಲ್‌ನಷ್ಟು ಬೃಹತ್‌ ಪ್ರಮಾಣದ ಭತ್ತ ರವಾನೆಯಾಗಬೇಕಾದರೆ ಅದಕ್ಕೆ ಎಷ್ಟು ಲಾರಿಗಳು ಬೇಕಾಗಬಹುದು. ಪ್ರಕರಣದ ತನಿಖೆಗೆ ವ್ಯಯವಾಗಲಿರುವ ಹಣವನ್ನೂ ಪರಿಗಣಿಸಿದರೆ ಈ ಭತ್ತವು ಮಾರುಕಟ್ಟೆಯ ಭತ್ತದ ಬೆಲೆಗೆ ಸಮನಾಗುತ್ತದೆ. ಇನ್ನಾದರೂ ಸರ್ಕಾರ ಇಂತಹ ಸಂದರ್ಭದಲ್ಲಿ ಕಾವಲು ಕಾಯಲು ದಕ್ಷ ಅಧಿಕಾರಿಗಳನ್ನು ನೇಮಿಸಿ ಕಳ್ಳತನಕ್ಕೆ ಕಡಿವಾಣ ಹಾಕಲಿ.

-ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT