ಯಾವುದೇ ಸಾಧನೆ ಮಾಡದಿದ್ದರೂ ಹಣ ಮತ್ತು ಜಾತಿ ಬೆಂಬಲ ಹೊಂದಿರುವ ವ್ಯಕ್ತಿಗಳನ್ನು ಮುಖ್ಯವಾಗಿಸಿಕೊಂಡು ನಾಡಿನಲ್ಲಿ ಸ್ವದೇಶಿ ಹಾಗೂ ಪರದೇಶದ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಯನ್ನು ಮಾರಾಟಕ್ಕೆ ಇಟ್ಟಿರುವುದು ಪ್ರಜ್ಞಾವಂತರು ತಲೆತಗ್ಗಿಸುವ ಸಂಗತಿ. ಇಂದು ನಿಜವಾದ ಸಾಧಕರಿಗೆ ಸಿಗಬೇಕಾದ ಗೌರವವು ಉಳ್ಳವರ ಪಾಲಾಗಿ ಸಾಧಕರನ್ನೇ ನಾಚಿಸುವಂತಹ ಕೃತ್ಯ ನಡೆಯುತ್ತಿದೆ. ಇಂತಹ ಹೊಣೆಗೇಡಿಗಳನ್ನು ಶಿಕ್ಷಿಸಬೇಕು.

ಈ ಡಾಕ್ಟರೇಟ್ ನೀಡಿಕೆ ದಂಧೆಯಲ್ಲಿ ತೊಡಗಿರುವ ವಿಶ್ವವಿದ್ಯಾಲಯಗಳು ಹಾಗೂ ಮಾರಾಟಗಾರರನ್ನು ಗಡಿಪಾರು ಮಾಡಿ, ಆ ಸಂಸ್ಥೆಗಳು ಕೊಡುವ ಎಲ್ಲಾ ಪದವಿಗಳನ್ನು ನಿಷೇಧಿಸಬೇಕು. ಆಗಮಾತ್ರ ಈ ಹಾವಳಿಗೆ ಕಡಿವಾಣ ಬೀಳುತ್ತದೆ. ಇಲ್ಲವಾದರೆ ಗೌರವ ಪದವಿಗಳ ಹರಾಜು ರಾಜಾರೋಷವಾಗಿ ನಡೆಯುತ್ತಾ ಸಾಗುವುದರಲ್ಲಿ ಅನುಮಾನವಿಲ್ಲ.

ಡಾ. ಶಿವರಾಜ ಯತಗಲ್, ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.