ಶಿಕ್ಷೆ ತ್ವರಿತವಾಗಿ ಆಗಿದ್ದಿದ್ದರೆ...

7

ಶಿಕ್ಷೆ ತ್ವರಿತವಾಗಿ ಆಗಿದ್ದಿದ್ದರೆ...

Published:
Updated:

1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಿಖ್‌ ಹತ್ಯಾಕಾಂಡ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಜ್ಜನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆಯಾಗಿದೆ.

ಈ ಮೂಲಕ, 34 ವರ್ಷಗಳ ನಂತರ ಸಂತ್ರಸ್ತರ ಪಾಲಿಗೆ ಒಂದು ಸಣ್ಣ ನ್ಯಾಯ ದೊರೆತಿದೆ. ಈ ಗಲಭೆಯಾದ ನಂತರ ಒಂದೋ ಎರಡೋ ವರ್ಷದೊಳಗೇ ಸಜ್ಜನ್‌ ಕುಮಾರ್‌ರಂತಹ ತಪ್ಪಿತಸ್ಥರಿಗೆ ಈಗ ಸಿಕ್ಕಂತಹದ್ದೇ ಕಠಿಣ ಶಿಕ್ಷೆ ಆಗಿದ್ದಿದ್ದರೆ, ಕ್ರಿಮಿನಲ್ ಹಿನ್ನೆಲೆಯ ಅರೆಸಾಕ್ಷರ ರಾಜಕೀಯ ನೇತಾರರಲ್ಲಿ ಭಯ ಹುಟ್ಟುತ್ತಿತ್ತು.

ಅಂತಹದೊಂದು ಭಯ, ಸಮಾಜದಲ್ಲಿ ಪರಿಣಾಮ ಬೀರುತ್ತಿತ್ತು. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಕೋಮು ಗಲಭೆ ಆಗದೇ ಇರಬಹುದಾದ ಸಾಧ್ಯತೆಯೂ ಇತ್ತು. ಈ ಸಾಧ್ಯತೆಯನ್ನೂ ದೇಶದಲ್ಲಿ ಆಗಿರುವಂಥ ರಾಜಕೀಯ ಪ್ರೇರಿತವಾದ ಇನ್ನಿತರ ಗಲಭೆಗಳಿಗೂ ವಿಸ್ತರಿಸಬಹುದು.

ಅನಿಲ್ ಕುಮಾರ್ ಪೂಜಾರಿ, ಮಂಗಳೂರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !