ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಕಾಯಕದ ಮಹತ್ವ ಅರಿಯಲಿ

Last Updated 3 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಉತ್ತು ಬಿತ್ತು ಬೆಳೆಯನ್ನು ತೆಗೆದು ಜನರ ಹಸಿವನ್ನು ತಣಿಸುತ್ತಿರುವ ರೈತನ ದುಡಿಮೆಯು ಎಲ್ಲಾ ಬಗೆಯ ಜಪ, ತಪ, ಯೋಗ, ವೇದ, ಮಂತ್ರಗಳಿಗಿಂತ ಮಿಗಿಲಾದುದು ಎಂಬ ಸಾಮಾಜಿಕ ವಾಸ್ತವವನ್ನು ಕುವೆಂಪು ಅವರು ‘ಸುಗ್ಗಿಹಾಡು’ ಕವನದಲ್ಲಿ ಹೇಳಿದ್ದಾರೆ.

ವ್ಯಕ್ತಿಯೊಬ್ಬನು ದಿನನಿತ್ಯ ದೇವರ ಹೆಸರನ್ನು ಒಂದೇ ಸಮನೆ ಮತ್ತೆ ಮತ್ತೆ ಉಚ್ಚರಿಸುವ ಜಪದಿಂದ; ಒಂದೆಡೆ ನಿಂತು, ಕುಳಿತು ಮಾಡುವ ತಪಸ್ಸಿನಿಂದ; ಉಸಿರನ್ನು ಒಳಗೆ ಎಳೆದುಕೊಂಡು, ನಾನಾ ರೀತಿಗಳಲ್ಲಿ ಹೊರಕ್ಕೆ ಬಿಡುತ್ತಾ ಜತೆಜತೆಯಲ್ಲೇ ದೇಹದ ಅಂಗಾಂಗಗಳನ್ನು ಅತ್ತಿತ್ತ ಆಡಿಸುವ ಯೋಗದಿಂದ ಮಾನವ ಸಮುದಾಯವು ಉಳಿದು ಬೆಳೆದು ಬಾಳುವುದಕ್ಕೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ಉದ್ಯೋಗ, ವಿದ್ಯೆ, ಆರೋಗ್ಯ ದೊರಕುವುದಿಲ್ಲ. ಆದರೆ ರೈತನು ತನ್ನ ನೆತ್ತರನ್ನು ಬಸಿದು, ಬೆವರನ್ನು ಹರಿಸಿ ಮಾಡುವ ಬೇಸಾಯದಿಂದ ಇಡೀ ಜಗತ್ತು ಇವೆಲ್ಲವನ್ನೂ ಪಡೆಯುತ್ತಿದೆ. ಆದುದರಿಂದ ರೈತನ ಕಾಯಕದ ಮಹತ್ವವನ್ನು ನಮ್ಮ ಆಳುವ ವರ್ಗ ಅರಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT