ಗೂಂಡಾವರ್ತನೆಯ ಪರಮಾವಧಿ
ಭಾರತದ ಕ್ರಿಕೆಟಿಗರು ಆಸ್ಟ್ರೇಲಿಯಾದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿರುವುದನ್ನು ತಿಳಿದು ದಿಗ್ಭ್ರಮೆಯಾಯಿತು. ಈ ಕಾಲಘಟ್ಟದಲ್ಲೂ ಜಾತಿ, ಬಣ್ಣ, ಲಿಂಗ, ಹುಟ್ಟಿದ ಸ್ಥಳದ ಆಧಾರದ ಮೇಲೆ ನಿಂದನೆ ಮಾಡುತ್ತಿರುವುದು ಗೂಂಡಾವರ್ತನೆಯ ಪರಮಾವಧಿಯೇ ಸರಿ. ಅಂದಹಾಗೆ ಇದು ಇಂದು ನಿನ್ನೆಯದಲ್ಲ, ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಜಾತಿಗೆ ಸೇರಿದ್ದಾನೆಂಬ ಕಾರಣಕ್ಕೋ ನಿರ್ದಿಷ್ಟ ಬಣ್ಣ ಹೊಂದಿದ್ದಾನೆಂಬ ಕಾರಣಕ್ಕೋ ಶತಮಾನಗಳಿಂದಲೂ ಇಂತಹ ನಿಂದನೆಗೆ ಗುರಿಯಾಗುವುದು ನಡೆಯುತ್ತಲೇ ಇದೆ.
ಇಂತಹ ಹೀನ ಮನಃಸ್ಥಿತಿಗೆ ಕಡಿವಾಣ ಹಾಕಬೇಕು. ಈ ಕಾರ್ಯದಲ್ಲಿ ಎಲ್ಲ ದೇಶಗಳು, ಎಲ್ಲ ಸರ್ಕಾರಗಳು ಮತ್ತು ಪ್ರಜೆಗಳ ಸಾಮೂಹಿಕ ಪ್ರಯತ್ನ ಅಗತ್ಯ. ಕಠಿಣ ಕಾನೂನುಗಳು ರೂಪುಗೊಂಡಾಗ ಮಾತ್ರ ಇಂತಹ ಹೇಯ ಕೃತ್ಯಗಳು ಕಡಿಮೆಯಾಗಿ, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಅರಿವು ಮೂಡಲು ಸಾಧ್ಯ.
- ಸಲೀಂ ಆರ್. ತಾಳಿಕೋಟೆ, ವಿಜಯಪುರ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.