ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ದೇಸಿ ಪ್ರತಿಭೆಗಳ ಸೇವೆ ಲಭಿಸಲಿ

ಅಕ್ಷರ ಗಾತ್ರ

ಗೂಗಲ್, ಮೈಕ್ರೊಸಾಫ್ಟ್, ಅಡೋಬಿ, ಐಬಿಎಂ ಮುಂತಾದ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಭಾರತದವರು ಸಿಇಒಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಈ ಗರಿಗೆ ಮತ್ತೊಂದು ಕಿರೀಟವೆಂಬಂತೆ ಟ್ವಿಟರ್‌ನ ಸಿಇಒ ಆಗಿ ಪರಾಗ್‌ ಅಗರ್‌ವಾಲ್ ಆಯ್ಕೆಯಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತದ ಐಐಟಿಯಲ್ಲಿ ವ್ಯಾಸಂಗ ಮಾಡಿದವರು ಎನ್ನುವುದು ವಿಶೇಷ. ಇಂತಹವರನ್ನು ಸದೃಢ ಜ್ಞಾನಿಗಳನ್ನಾಗಿಸಿದ ನಂತರ ನಮ್ಮ ದೇಶದಲ್ಲೇ ಯಾಕೆ ದುಡಿಸಿಕೊಳ್ಳುವ ವ್ಯವಸ್ಥೆ ಇಲ್ಲ. ಎಲ್ಲ ಸೌಲಭ್ಯವಿದ್ದರೂ ಯಾಕೆ ಇವರೆಲ್ಲ ಭಾರತವನ್ನು ಬಿಟ್ಟು ವಿದೇಶಗಳಿಗೆ ಹಾರುತ್ತಿದ್ದಾರೆ. ಇವರ ತರಹವೇ ಎನ್‌.ಆರ್‌.ನಾರಾಯಣಮೂರ್ತಿ ಮತ್ತು ಅವರ ಸ್ನೇಹಿತರು ವಿದೇಶಕ್ಕೆ ಹೋಗಿದ್ದರೆ ‘ಇನ್ಫೊಸಿಸ್’ ಎನ್ನುವ ದೈತ್ಯ ಸಂಸ್ಥೆ ನಮ್ಮ ದೇಶದಲ್ಲಿ ಬೆಳೆಯಲು ಸಾಧ್ಯವಾಗುತ್ತಿತೇ?

ಭಾರತೀಯರು ಅನ್ಯ ದೇಶಗಳ ದೊಡ್ಡ ದೊಡ್ಡ ಕಂಪನಿಗಳ ಸಿಇಒ ಆಗುವುದಕ್ಕಿಂತ ನಮ್ಮ ದೇಶದಲ್ಲೇ ಬೃಹತ್‌ ಸಂಸ್ಥೆಗಳನ್ನು ಕಟ್ಟಿ ವಿದೇಶಗಳಿಗೆ ಸಡ್ಡು ಹೊಡೆಯುವಂತೆ ಭಾರತವನ್ನು ಬೆಳೆಸಬೇಕು. ಆಗ ಮಾತ್ರ ಐಐಟಿಯಂತಹ ಜ್ಞಾನಸಾಗರದಲ್ಲಿ ಮಿಂದೆದ್ದದ್ದಕ್ಕೂ ಸಾರ್ಥಕವಾಗುತ್ತದೆ.

-ರಾಜು ಬಿ. ಲಕ್ಕಂಪುರ, ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT