ಭಾನುವಾರ, ಅಕ್ಟೋಬರ್ 25, 2020
21 °C

ವಾಚಕರ ವಾಣಿ: ಪಾಲಿಸಿ ಆಯ್ಕೆಯಲ್ಲಿ ಜನ ಪ್ರಬುದ್ಧರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ಈ ಇನ್ಶೂರೆನ್ಸ್ ಖರೀದಿಸಬೇಕೇ?’ ಎಂಬ ಅವಿನಾಶ್‌ ಕೆ.ಟಿ. ಅವರ ಲೇಖನ (ಪ್ರ.ವಾ., ಸೆ. 21) ಪೂರ್ವಗ್ರಹದಿಂದ ಪೀಡಿತವಾಗಿದೆ. ಜೀವ ವಿಮಾ ನಿಗಮದಲ್ಲಿ ಯಾವುದೇ ಪಾಲಿಸಿಗೂ ಶೇ 42ರಷ್ಟು ಕಮಿಷನ್ ನೀಡುವುದು ಸತ್ಯಕ್ಕೆ ದೂರವಾದ ಸಂಗತಿ. ಕೆಲವು ಪಾಲಿಸಿಗಳಲ್ಲಿ ಏಜೆಂಟರಿಗೆ ಸಿಗುವ ಕಮಿಷನ್ ಅವರು ಓಡಾಡುವ ಪೆಟ್ರೋಲ್ ಖರ್ಚಿಗೂ ಸಾಕಾಗುವುದಿಲ್ಲ. ಜೀವವಿಮಾ ಪ್ರತಿನಿಧಿಗಳು ತಮ್ಮ ವೃತ್ತಿಯನ್ನು ಒಂದು ಸಮಾಜಸೇವೆ ಎಂದು ಭಾವಿಸಿ, ದೇಶದ ಆರ್ಥಿಕ ಪರಿಸ್ಥಿತಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಪಟ್ಟಭದ್ರ ಹಿತಾಸಕ್ತಿಗಳು ಕೆಲವು ದಶಕಗಳಿಂದಲೂ ಇಂತಹ ಅಪಪ್ರಚಾರವನ್ನು ಮಾಡುತ್ತಲೇ ಬಂದಿವೆ. ಈಗಿನ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮ, ಸಮೂಹ ಮಾಧ್ಯಮಗಳ ಮುಖಾಂತರ ಅಗಾಧ ಅರಿವು ಹೊಂದಿರುವ ಪಾಲಿಸಿದಾರರು, ಯಾವ ಪಾಲಿಸಿಯನ್ನು ತೆಗೆದುಕೊಳ್ಳಬೇಕು ಅಥವಾ ಬಿಡಬೇಕು ಎಂಬುದನ್ನು ನಿರ್ಧರಿಸುವಷ್ಟು ಶಕ್ತರಾಗಿರುತ್ತಾರೆ.

ಬೂಕನಕೆರೆ ವಿಜೇಂದ್ರ, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು