ಶನಿವಾರ, ಜುಲೈ 2, 2022
27 °C

ವಾಚಕರ ವಾಣಿ: ಸಹಬಾಳ್ವೆಗೆ ಯಾವುದು ಮಾನದಂಡ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರ್ಜಾತಿ ವಿವಾಹ ತಡೆಗೆ ಮಾತೃ ಮಂಡಳಿ ರಚಿಸಬೇಕೆಂದು ಪೇಜಾವರ ಮಠಾಧೀಶರು ಹೇಳಿದ್ದಾರೆ. ವಿವಾಹ ಎನ್ನುವುದು ನಿಜಕ್ಕೂ ಜಾತಿಗೆ ಸಂಬಂಧಿಸಿದ್ದೇ? ಜಾತಿ, ಕುಲ, ನಕ್ಷತ್ರ, ಧರ್ಮ, ಗೋತ್ರ ಎನ್ನುವುದು ಪರಸ್ಪರ ವ್ಯಕ್ತಿಗಳಲ್ಲಿ, ಸಂಗಾತಿಗಳಲ್ಲಿ ಪ್ರೀತಿ, ಸೌಹಾರ್ದ, ಕರುಣೆ, ಅನುಕಂಪ ಹಾಗೂ ಮೈತ್ರಿಯನ್ನು ಬೆಳೆಸುತ್ತಿದೆಯೇ? ಎಲ್ಲಾ ವಿಧಿ ವಿಧಾನಗಳನ್ನು, ಜಾತಿ ಧರ್ಮಗಳನ್ನು ಅನುಸರಿಸಿ ಮದುವೆ ಮಾಡಿದ ದಂಪತಿಗಳು ನಿಜಕ್ಕೂ ಸಂತೋಷವಾಗಿ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆಯೇ? ಮಾನಸಿಕ, ದೈಹಿಕ, ಭಾವನಾತ್ಮಕ ನೋವುಗಳನ್ನು ತಿಂದುಂಡು, ಕುಟುಂಬದ ಮರ್ಯಾದೆ ಅಂತಲೋ ವ್ಯಕ್ತಿಘನತೆ ಅಂತಲೋ ಜಾತಿ, ಧರ್ಮ, ಸಂಸ್ಕಾರ, ನಿಂದೆಗಳಿಗೆ ಹೆದರಿಯೋ ಸತ್ತವರೆಷ್ಟೋ ಸತ್ತಂತೆ ಬದುಕುತ್ತಿರುವವರೆಷ್ಟೋ?! ಮದುವೆ ಎಂಬುದು ಕೇವಲ ಸಂತಾನೋತ್ಪತ್ತಿ ನಿಮಿತ್ತವೇ, ಜಾತಿ ನಿಮಿತ್ತವೇ?

ಬಹುತ್ವವುಳ್ಳ ದೇಶದಲ್ಲಿ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಎಲ್ಲರಿಗೂ ಕೊಟ್ಟು, ಎಲ್ಲರೂ ಒಡಗೂಡಿ ಬದುಕುವಂತೆ ಮಾಡಬೇಕಾಗಿದೆ. ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನೂ ಗೌರವಿಸುತ್ತ, ಪ್ರೀತಿಸುತ್ತಾ ಸ್ವತಂತ್ರವಾಗಿ, ಸಂತೋಷವಾಗಿ ಬದುಕಲು ಅವಕಾಶ ಕಲ್ಪಿಸಬೇಕಾಗಿದೆ.

-ಜ್ಯೋತಿ ಭಾಸ್ಕರ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು