ವಾಚಕರ ವಾಣಿ | IPL: ಕನ್ನಡಿಗರೇ ಇಲ್ಲದ ಆರ್‌ಸಿಬಿ ಗೆದ್ದುದಕ್ಕೆ ಸಂಭ್ರಮಿಸಬೇಕೇ?

ಟಾಟಾ ಐಪಿಎಲ್ ಈ ವರ್ಷದ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಮ್ಯಾಚಿನಲ್ಲಿ ಆರ್‌ಸಿಬಿ ಮತ್ತು ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು ಆಡಿದವು.
ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಎಲ್‌ಎಸ್‌ಜಿ ತಂಡ ಹೋರಾಡಿ ಸೋತಿತು. ಆರ್‌ಸಿಬಿ ತಂಡ ಜಯ ಗಳಿಸಿ ಮುಂದಿನ ಹಂತಕ್ಕೆ ನಡೆಯಿತು. ಕನ್ನಡಿಗರ ವಿಪರ್ಯಾಸದ ಸ್ಥಿತಿಯೇ ಇದು.
ಒಬ್ಬನೇ ಒಬ್ಬ ಕನ್ನಡಿಗ ಆಟಗಾರ ಇಲ್ಲದಿದ್ದರೂ ಕೇವಲ ಬೆಂಗಳೂರು ಎಂಬ ಹೆಸರಿರುವ ಆರ್‌ಸಿಬಿ ತಂಡ ಗೆದ್ದುದಕ್ಕೆ ಸಂಭ್ರಮಿಸಬೇಕೋ ಅಥವಾ ಕನ್ನಡಿಗ ರಾಹುಲ್ ನಾಯಕತ್ವದ ತಂಡ ಎಲ್‌ಎಸ್‌ಜಿ ಸೋತಿದ್ದಕ್ಕೆ ಬೇಸರಗೊಳ್ಳಬೇಕೋ ಎಂಬುದು. ಮನಸ್ಸಿಗೆ ಹಿಂಸೆ ನೀಡುವ ವಿಚಾರ ಇದು. ಆರ್‌ಸಿಬಿ ನಮ್ಮ ತಂಡ ಎಂಬುದನ್ನು ಒಪ್ಪಲು ಮನಸ್ಸು ಒಪ್ಪದು. ಹಾಗಾಗಿ, ಮುಂದಿನ ವರ್ಷಗಳಲ್ಲಿ ಆಯಾ ರಾಜ್ಯದ ಕನಿಷ್ಠ ನಾಲ್ವರು ಆಟಗಾರರು ತಂಡದಲ್ಲಿರಬೇಕು ಎಂಬ ನಿಯಮ ತರಲಿ. ಇಲ್ಲವಾದಲ್ಲಿ ತಂಡದ ಹೆಸರಲ್ಲಿ ಮಾತ್ರ ಬೆಂಗಳೂರು ಎಂದು ಇದ್ದರೆ ಅದು ಅನರ್ಥವಷ್ಟೆ.
–ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.