ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಶಾಲಾ ಹಂತದಲ್ಲಿ ಹೊಸ ನೀತಿ ಅನುಷ್ಠಾನ ಸಾಧ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಶಿಕ್ಷಣದಲ್ಲಿ ಅಳವಡಿಸುವ ಇಂಗಿತವನ್ನು ಶಿಕ್ಷಣ ಸಚಿವರು ವ್ಯಕ್ತಪಡಿಸಿರುವುದು ಸ್ವಾಗತಾರ್ಹ. ಆದರೆ, ಬಾಲ್ಯಪೂರ್ವ ಕಾಳಜಿ ಮತ್ತು ಶಿಕ್ಷಣ, ಬುನಾದಿ ಶಿಕ್ಷಣ ಹಂತವನ್ನು ಯಾವ ರೀತಿ ಅನುಷ್ಠಾನಗೊಳಿಸುತ್ತಾರೆ ಎಂಬುದರ ಆಧಾರದ ಮೇಲೆ ಈ ನೀತಿಯ ಭವಿಷ್ಯ ನಿರ್ಧಾರವಾಗುತ್ತದೆ.

ಬುನಾದಿ ಶಿಕ್ಷಣವನ್ನು ಯಶಸ್ವಿಗೊಳಿಸಬೇಕಾದರೆ ಮೊದಲು ಅಂಗನವಾಡಿ, ಪೂರ್ವ ಪ್ರಾಥಮಿಕದಲ್ಲಿ ಈಗ ನೀಡುತ್ತಿರುವ ಶಿಕ್ಷಣದ ಹಂತದಲ್ಲಿ ಈಗಿನಿಂದಲೇ ಪೂರ್ವ ತಯಾರಿ ನಡೆಸಬೇಕಾಗುತ್ತದೆ. ಏಕೆಂದರೆ, ಅಲ್ಲಿ 3 ವರ್ಷದಿಂದ 6 ವರ್ಷದವರೆಗೆ ನೀಡುವ ಬುನಾದಿ ಶಿಕ್ಷಣವನ್ನು ಪ್ರತ್ಯೇಕವಾಗಿ ಮಾಡಬೇಕೋ ಅಥವಾ ಈಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇರಿಸಬೇಕೋ? ಯಾವ ಶಿಕ್ಷಕರನ್ನು ನೇಮಕ ಮಾಡಬೇಕು? ಅಂಗನವಾಡಿ ಶಿಕ್ಷಕಿಯರನ್ನೇ ಮುಂದುವರಿಸಬೇಕೇ ಎಂಬಂಥ ಅಂಶಗಳೆಲ್ಲ ಮುಖ್ಯವಾಗುತ್ತವೆ.

- ನಿಂಗಪ್ಪ ಮಾಳಶೆಟ್ಟಿ, ವ್ಯಾಸನಕೆರೆ, ಹೊಸಪೇಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು