ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಸಿದಾರರನ್ನು ಮೋಸಗೊಳಿಸಲು ಸಾಧ್ಯವೇ?

Last Updated 27 ಸೆಪ್ಟೆಂಬರ್ 2020, 15:43 IST
ಅಕ್ಷರ ಗಾತ್ರ

‘ಈ ಇನ್ಶೂರೆನ್ಸ್ ಖರೀದಿಸಬೇಕೇ?’ ಎಂಬ ತಲೆಬರಹದಡಿ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ ಅವಿನಾಶ್‌ ಕೆ.ಟಿ. ಅವರು ಬರೆದ ಲೇಖನ (ಪ್ರ.ವಾ., ಸೆ. 21) ಇಡೀ ಇನ್ಶೂರೆನ್ಸ್ ಏಜೆಂಟರ ಸಮೂಹವನ್ನೇ ಕಳಂಕಕ್ಕೆ ಈಡು ಮಾಡುವಂತಿದೆ.

ಸಾಂಪ್ರದಾಯಿಕ ಇನ್ಶೂರೆನ್ಸ್ ಪಾಲಿಸಿಗಳು ಲಾಭದಾಯಕವಲ್ಲ, ಪಾಲಿಸಿದಾರರಿಗೆ ಜೀವನಪೂರ್ತಿ ರಿಸ್ಕ್ ಕವರೇಜ್ ಇರುವುದಿಲ್ಲ, ಇಂತಹ ಪಾಲಿಸಿಗಳಿಂದ ಏಜೆಂಟರು ಉದ್ಧಾರವಾಗುತ್ತಾರೆ ವಿನಾ ಪಾಲಿಸಿದಾರರಲ್ಲ ಎಂದೆಲ್ಲ ಅವರು ಹೇಳಿದ್ದಾರೆ. ಏಜೆಂಟರಿಗೆ ಶೇ 42ರಷ್ಟು ಕಮಿಷನ್ ನೀಡಲಾಗುತ್ತದೆ ಎಂದಿಟ್ಟುಕೊಂಡರೂ ಈ ಪೈಕಿ ಜಿಎಸ್‌ಟಿ, ವೃತ್ತಿ ತೆರಿಗೆ, ಟಿಡಿಎಸ್‌ ಎಲ್ಲವನ್ನೂ ಹಿಡಿಯಲಾಗುತ್ತದೆ. ಅಲ್ಲದೆ ಪ್ರತೀ ತಿಂಗಳೂ ಇದೇ ರೀತಿಯ ವ್ಯವಹಾರ ನಡೆಯುವುದಿಲ್ಲ.

ಇನ್ಶೂರೆನ್ಸ್‌ ಕಂಪನಿಗಳು ಗಳಿಸಿದ ಲಾಭದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಸರ್ಕಾರಕ್ಕೆ ಸಾಲ ನೀಡುತ್ತವೆ. ಪಾಲಿಸಿದಾರರಿಗೆ ಜೀವನ ಭದ್ರತೆ ಒದಗಿಸುತ್ತವೆ. ಇನ್ಶೂರೆನ್ಸ್ ಕೊಳ್ಳುವವರು ಕಣ್ಣು ಮುಚ್ಚಿಕೊಂಡೇನೂ ಇರುವುದಿಲ್ಲ. ಎಲ್ಲಾ ವಿವರ ತಿಳಿಯುತ್ತಾರೆ. ಇನ್ಶೂರೆನ್ಸ್ ಬಾಂಡ್ ತಲುಪಿದ ನಂತರ ಕೂಡ 15 ದಿನಗಳ ಕಾಲ ಫ್ರೀ ಲಾಕ್‌ ಪೀರಿಯಡ್‌ ಇರುತ್ತದೆ. ಈ ಅವಧಿಯಲ್ಲಿ ಗ್ರಾಹಕರು ಬಾಂಡ್‌ನಲ್ಲಿ ಇರಬಹುದಾದ ಮಾಹಿತಿ ಮತ್ತು ಏಜೆಂಟ್ ನೀಡಿದ ವಿವರಗಳನ್ನು ತುಲನೆ ಮಾಡಬಹುದು. ವ್ಯತ್ಯಾಸವಾಗಿದೆ ಎನಿಸಿದರೆ ಬಾಂಡ್ ಅನ್ನು ಕೂಡಲೇ ಹಿಂದಿರುಗಿಸಬಹುದು. ಪ್ರೀಮಿಯಂ ಚೆಕ್‌ ಮನೆ ಬಾಗಿಲಿಗೆ ಹಿಂದಿರುಗುತ್ತದೆ. ಅಂದಮೇಲೆ ಪಾಲಿಸಿದಾರರನ್ನು ಮೋಸಗೊಳಿಸುವುದು ಹೇಗೆ ಸಾಧ್ಯ?

ಎಂ.ಕೆ.ವಾಸುದೇವರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT