ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶಕ, ಲೇಖಕರನ್ನು ಜಿಎಸ್‌ಟಿಯಿಂದ ಹೊರಗಡೆ ಇಟ್ಟರೆ ಉತ್ತಮ

Last Updated 7 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಲೇಖಕ ಜಿ.ಎನ್.ರಂಗನಾಥ ರಾವ್ ಅವರು ಉಲ್ಲೇಖಿಸಿರುವಂತೆ (ವಾ.ವಾ., ಸೆ. 6) ಲೇಖಕ, ಪ್ರಕಾಶಕರಿಗೆ ಜಿಎಸ್‌ಟಿ ವಿಧಿಸುವ ಕ್ರಮ ಸರಿಯಾದುದಲ್ಲ. ಪುಸ್ತಕೋದ್ಯಮವನ್ನು ವೃತ್ತಿಯಾಗಿಸಿಕೊಂಡವರಿಗೆ ಜಿಎಸ್‌ಟಿ ವಿಧಿಸಿದರೆ ತಪ್ಪೇನೂ ಇಲ್ಲ. ಆದರೆ ಇಡೀ ರಾಜ್ಯದಲ್ಲಿ ಅಂಥ ವೃತ್ತಿಪರ ಪ್ರಕಾಶಕರು ಇರುವುದು ಬೆರಳೆಣಿಕೆಯಷ್ಟು ಮಾತ್ರ. ಹೇಳಿ ಕೇಳಿ ಪುಸ್ತಕೋದ್ಯಮದ ಪರಿಸ್ಥಿತಿ ತೀರಾ ಹೇಳಿಕೊಳ್ಳುವಂಥ ಸ್ಥಿತಿಯಲ್ಲಿ ಇಲ್ಲ. ಪುಸ್ತಕ ಪ್ರಕಟಿಸುವ ಹವ್ಯಾಸ ಇರುವವರಿಗೆ ಜಿಎಸ್‌ಟಿ ಮಾರಕ. ಅಷ್ಟೇ ಅಲ್ಲ ಕೆಲವೊಮ್ಮೆ ಹಾಕಿದ ಬಂಡವಾಳವೂ ವಾಪಸು ಬರುವ ಖಾತರಿ ಇರುವುದಿಲ್ಲ. ಕೆಲವಾರು ಸಂದರ್ಭಗಳಲ್ಲಿ ಲೇಖಕನ ಒತ್ತಾಯಕ್ಕೆ ಮಣಿದು ಪುಸ್ತಕವನ್ನು ಪ್ರಕಟಿಸಿ ಬಿಡುಗಡೆಗೊಳಿಸಿ ಮಾರುಕಟ್ಟೆಯಲ್ಲಿ ಪುಸ್ತಕದ ಬೇಡಿಕೆ ಇಲ್ಲದೆ, ಇತ್ತ ಹಾಕಿದ ಬಂಡವಾಳವೂ ವಾಪಸು ಬರದೆ ನಷ್ಟ ಅನುಭವಿಸುವ ಸಂದರ್ಭವೂ ಬರದೇ ಇರದು. ಒಟ್ಟಾರೆ ಪ್ರಕಾಶಕ, ಲೇಖಕರನ್ನು ಜಿಎಸ್‌ಟಿಯಿಂದ ಹೊರಗಡೆ ಇಟ್ಟರೆ ಉತ್ತಮ.

- ಸಿರಿಗೇರಿ ಯರಿಸ್ವಾಮಿ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT