ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಹೊಸ ಪ್ರಯೋಗಗಳೆಲ್ಲ ‘ಅರುಚಿ’ ಅಲ್ಲ

Last Updated 9 ಜೂನ್ 2021, 19:30 IST
ಅಕ್ಷರ ಗಾತ್ರ

ಇಂದಿನ ಚಿತ್ರಗೀತೆಗಳಲ್ಲಿ ಅರುಚಿಯೇ ಅಭಿರುಚಿಯಾದಂತಿದೆ ಎಂಬ ಡಾ. ದೊಡ್ಡರಂಗೇಗೌಡ ಅವರ ಅಭಿಪ್ರಾಯಕ್ಕೆ (ಸಂಗತ, ಮೇ 28) ‘ಈಗಿನ ಚಿತ್ರಗೀತೆಗಳಲ್ಲೂ ಮತ್ತೆ ಮತ್ತೆ ಕೇಳುವಂತಹ ಗೀತೆಗಳು ಇವೆ’ ಎಂಬ ಇಳಾ ಕುಲಕರ್ಣಿ ಅವರ ಪ್ರತಿಕ್ರಿಯೆಯನ್ನು (ವಾ.ವಾ., ಜೂನ್‌ 9) ನಾನು ಅನುಮೋದಿಸುತ್ತೇನೆ. ಚಲನಚಿತ್ರ ಎಂಬುದು ಸದಾಕಾಲ ಕ್ರಿಯಾಶೀಲತೆಗೆ ತನ್ನನ್ನು ಒಡ್ಡಿಕೊಂಡು ಬೆಳೆದುಬರುತ್ತಿರುವ ಕ್ಷೇತ್ರ. ಈ ಪ್ರಕ್ರಿಯೆಯಲ್ಲಿ ಕೆಲವು ಪ್ರಯೋಗಗಳು ಯಶಸ್ವಿಯಾಗುತ್ತವೆ, ಮತ್ತೆ ಕೆಲವು ಮರೆಯಾಗುತ್ತವೆ. ಹೊಸ ಪ್ರಯೋಗಗಳೆಲ್ಲವೂ ‘ಅರುಚಿ’ಯಿಂದ‌ ಕೂಡಿರುತ್ತವೆ ಎಂದು ಅಲ್ಲಗಳೆಯಲಾಗದು.

ಅಲ್ಲದೆ ಚಲನಚಿತ್ರ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಬೇಕಾದಷ್ಟು ಹೊಸ ಪ್ರತಿಭೆಗಳ ಪ್ರವೇಶವಾಗುತ್ತಿದೆ. ಅವರಲ್ಲಿ ಬಹುತೇಕರು ಬಹಳ ಕ್ರಿಯಾಶೀಲ ಚಿಂತನೆಯಿಂದ ಅತ್ಯುತ್ತಮವಾಗಿ ತೊಡಗಿಸಿಕೊಂಡಿದ್ದಾರೆ. ಅಂತಹ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಮಾಧ್ಯಮವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟುವತ್ತ ನಾವೆಲ್ಲರೂ ಗಮನಹರಿಸೋಣ.

–ಸುಗ್ಗನಹಳ್ಳಿ ಷಡಕ್ಷರಿ‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT