ಭಾನುವಾರ, ಜನವರಿ 26, 2020
27 °C

ಸಿನಿಮಾ ಡೈಲಾಗ್‌ ಅಲ್ಲ ಸ್ವಾಮಿ...

ನಗರ ಗುರುದೇವ್ ಭಂಡಾರ್ಕರ್. ಹೊಸನಗರ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಪಚುನಾವಣೆ ಪ್ರಚಾರದ ವೇಳೆ ತೆಲುಗು ಹಾಸ್ಯನಟ ಬ್ರಹ್ಮಾನಂದಂ ಅವರು ‘ಮರ್ಯಾದೆಯಾಗಿ ಸುಧಾಕರ್‌ಗೆ ಮತ ನೀಡಿ, ಇಲ್ಲದಿದ್ದರೆ ಶಾಂತಿ ಕದಡುತ್ತದೆ’ ಎಂದು ಹೇಳಿದ್ದಾರೆ (ಪ್ರ.ವಾ., ಡಿ.2). ಇಲ್ಲಿ ಅವರು ಬಳಸಿರುವ ಭಾಷೆ ಧಮಕಿ ಹಾಕಿದಂತಿದೆ. ನಟರು ವಾಸ್ತವ ಮರೆತಿರಬೇಕು, ಕ್ಯಾಮೆರಾ ಮುಂದೆ ಹೇಳುವ ಸಿನಿಮಾ ಡೈಲಾಗ್ ಎಂದುಕೊಂಡಿರಬೇಕು! ಇಂತಹ ಮಾತುಗಳು ಚುನಾವಣೆಯಲ್ಲಿ ಅಭ್ಯರ್ಥಿಗೆ ತಿರುಗುಬಾಣ ಆಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಬಳಸುವ ಭಾಷೆ ಮರ್ಯಾದೆಯುತವಾಗಿ ಇರಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು