ಗುರುವಾರ , ಜುಲೈ 29, 2021
23 °C

ಅದೇ ರಾಜಕಾರಣಿಗಳು, ಅದೇ ಮೇಲಾಟ!

ಬಿಂಡಿಗನವಿಲೆ ಭಗವಾನ್, ಬೆಂಗಳೂರು Updated:

ಅಕ್ಷರ ಗಾತ್ರ : | |

ರಾಜ್ಯಸಭೆ ಹಾಗೂ ವಿಧಾನ ಪರಿಷತ್ತುಗಳು ಸರ್ಕಾರಗಳಿಗೆ ಮಾರ್ಗದರ್ಶನ ನೀಡುವ ಮೇಧಾವಿಗಳ ಮನೆ ಎಂಬ ಭಾವನೆ ಇದೆ. ಈ ಅನುಭವ ಮಂಟಪಗಳು ಅರಿತವರಿಂದ, ಅನುಭಾವಿಗಳಿಂದ ಕಳೆಗಟ್ಟಬೇಕು. ಅವು ಸಾಧ್ಯವಾದಷ್ಟೂ ರಾಜಕೀಯದಿಂದ ಮುಕ್ತವಾಗಿರಬೇಕು.

ಕೊರೊನಾದ ಇಂಥ ಸಂಕಷ್ಟ ಪರಿಸ್ಥಿತಿಯಲ್ಲಾದರೂ ರಾಜ್ಯಸಭೆಗೆ, ವಿಧಾನ ಪರಿಷತ್ತಿಗೆ ತಜ್ಞ ವೈದ್ಯರನ್ನು, ತಂತ್ರಜ್ಞರನ್ನು, ಶಿಕ್ಷಣ ತಜ್ಞರನ್ನು, ವಾಸ್ತುಶಿಲ್ಪಿಗಳನ್ನು, ಅರ್ಥಶಾಸ್ತ್ರಜ್ಞರನ್ನು, ಕೃಷಿ ವಿಜ್ಞಾನಿಗಳನ್ನು ಆರಿಸಿ ಕಳಿಸುವಂತಹ ವಿವೇಕವನ್ನು ರಾಜಕೀಯ ಪಕ್ಷಗಳು ತೋರಬಹುದು ಎಂದು ಭಾವಿಸಿದವರಿಗೆ ನಿರಾಸೆ ಆಗುವ ರೀತಿಯಲ್ಲಿ ಬೆಳವಣಿಗೆಗಳು ನಡೆದಿವೆ. ಅದೇ ರಾಜಕಾರಣಿಗಳು, ಅದೇ ವಂಶ ರಾಜಕಾರಣ, ಅದೇ ಗುಂಪುಗಾರಿಕೆ, ಜಾತಿ– ಉಪಜಾತಿಗಳ ಮೇಲಾಟ!

-ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು