ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಮ್ಮೆಪಡಬೇಕಲ್ಲವೇ?

Last Updated 28 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರಿಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದೆ. ಕೋಟೆಗೆ ಹೋಗುವ ರಸ್ತೆಯ ಅಕ್ಕಪಕ್ಕದ ಬಹತೇಕ ಅಂಗಡಿಗಳ ಫಲಕಗಳಲ್ಲಿ ಊರಿನ ಹೆಸರನ್ನು ‘ಚ. ಕಿತ್ತೂರು’ ಎಂದು ಬರೆದಿರುವುದನ್ನು ಗಮನಿಸಿದೆ.

ರಾಣಿ ಚನ್ನಮ್ಮ ಅವರ ಕರ್ಮಭೂಮಿ ಕಿತ್ತೂರಿಗೆ ‘ಚನ್ನಮ್ಮನ ಕಿತ್ತೂರು’ ಎಂದು ರಾಜ್ಯ ಸರ್ಕಾರ ಮರುನಾಮಕರಣ ಮಾಡಿತ್ತು. ಅಷ್ಟೇ ಅಲ್ಲ ಕನಕದಾಸರು ಹುಟ್ಟಿದ ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲ್ಲೂಕಿನ ‘ಬಾಡ’ ಗ್ರಾಮವನ್ನು ‘ಕನಕನ ಬಾಡ’ ಎಂದು ಮರುನಾಮಕರಣ ಮಾಡಿದೆ. ಈ ಮರುನಾಮಕರಣದ ಉದ್ದೇಶ ಆ ಭೂಮಿಯಲ್ಲಿ ಹುಟ್ಟಿದ ಮಹನೀಯರನ್ನು ನೆನಪಿಸಿಕೊಳ್ಳುವುದೇ ಆಗಿದೆ.

ತನ್ನ ಚಿಕ್ಕ ಸಂಸ್ಥಾನವನ್ನು ರಕ್ಷಿಸಲು ಚನ್ನಮ್ಮ ಅವರು ಪ್ರಾಣದ ಹಂಗು ತೊರೆದು ಬ್ರಿಟಿಷರ ವಿರುದ್ಧ ಹೋರಾಡಿದ್ದಳೆಂಬುದು ಎಲ್ಲರಲ್ಲೂ ಹೆಮ್ಮೆ ಮೂಡಿಸುವ ವಿಚಾರವಲ್ಲವೇ?

ಆದರೆ ಇಂದು ಕಿತ್ತೂರಿನ ಕೋಟೆ, ಚನ್ನಮ್ಮನ ಅರಮನೆಗಳನ್ನು ನೋಡಿದರೆ ನೋವಾಗುತ್ತದೆ. ರಾಣಿಯಾಗಿ ವೈಭೋಗದ ಸುಪ್ಪತ್ತಿಗೆಯಲ್ಲಿ ಕೂರದೆ, ಸಂಸ್ಥಾನ ರಕ್ಷಣೆಗಾಗಿ ಸ್ವಾಭಿಮಾನದಿಂದ ಹೋರಾಡಿದ ಧೀರ ಮಹಿಳೆ ರಾಣಿ ಚನ್ನಮ್ಮನ ಹೆಸರನ್ನು ಹೇಳಲು, ಬರೆಯಲು ಅಲ್ಲಿನ ಜನರು ಹೆಮ್ಮೆಪಡಬೇಕೇ ಹೊರತು, ಸಣ್ಣತನ ತೋರಬಾರದು.

ಹಲವಾಗಲ ಶಂಭು,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT