ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಬರಹ: ಹಕ್ಕುಸ್ವಾಮ್ಯ ಮುಕ್ತವಾಗಲಿ

Last Updated 14 ಜುಲೈ 2022, 19:30 IST
ಅಕ್ಷರ ಗಾತ್ರ

ಕುವೆಂಪು ಅವರ ಪುಸ್ತಕಗಳು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡುವುದು ತೀರಾ ಅಗತ್ಯವಾಗಿ ಮಾಡಬೇಕಾದ ಕೆಲಸ ಎಂದು ಕೆಲ ಲೇಖಕರು ಪತ್ರ ಬರೆದಿರುವುದಕ್ಕೆ (ವಾ.ವಾ., ಜುಲೈ 11) ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರು ಕುವೆಂಪು ಅವರ ಸಾಹಿತ್ಯದ ಹಕ್ಕುಸ್ವಾಮ್ಯ ಪ್ರತಿಷ್ಠಾನಕ್ಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ (ವಾ.ವಾ., ಜುಲೈ 14). ಕುವೆಂಪು ಅವರ ಸಾಹಿತ್ಯ ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡುವ ದಾರಿ, ಅವರ ಬರಹಗಳನ್ನು ಹಕ್ಕುಸ್ವಾಮ್ಯದಿಂದ ಮುಕ್ತಗೊಳಿಸುವುದು.

ಸರ್ಕಾರ ಮನಸ್ಸು ಮಾಡಿದರೆ ಕುವೆಂಪು ಅವರ ಸಮಗ್ರ ಬರಹಗಳ ಹಕ್ಕುಸ್ವಾಮ್ಯವನ್ನು ಪಡೆದುಕೊಂಡು ಅವರ ಬರಹಗಳು ಎಲ್ಲರಿಗೂ ದೊರೆಯುವಂತೆ ಮಾಡಬಹುದು. ತಮಿಳುನಾಡಿನಲ್ಲಿ ಸುಬ್ರಮಣ್ಯ ಭಾರತಿ ಅವರ ಸಾಹಿತ್ಯ ಕೃತಿಗಳ ಹಕ್ಕುಸ್ವಾಮ್ಯವನ್ನು ಅಲ್ಲಿನ ಸರ್ಕಾರ ಪಡೆದು ಅವರ ಎಲ್ಲಾ ಬರಹಗಳನ್ನು 1950ರಲ್ಲಿಯೇ ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಿದೆ. ಈ ಬಗ್ಗೆ ಎ.ಆರ್.ವೆಂಕಟಾಚಲಪತಿ ಅವರು ‘Who Owns that Song? The Battle for Subramania Bharati's Copyright’ ಎನ್ನುವ ಸ್ವಾರಸ್ಯಕರ ಮಾಹಿತಿಯುಳ್ಳ ಪುಸ್ತಕ ಬರೆದಿದ್ದಾರೆ. ಸುಬ್ರಮಣ್ಯ ಅವರ ಕವನ ಮತ್ತು ಇತರ ಬರಹಗಳನ್ನು ನಾಟಕ, ಸಿನಿಮಾ ಹಾಗೂ ಇತರ ಕ್ಷೇತ್ರಗಳಲ್ಲಿ ಬಳಸಲು ಮತ್ತು ಸುಲಭವಾಗಿ ಓದುಗರಿಗೆ ತಲುಪಿಸಲು ಕಾಪಿರೈಟ್ ಸಮಸ್ಯೆಯಿಂದಾಗಿ ಸಾಧ್ಯವಾಗದಿದ್ದಾಗ, ಅಲ್ಲಿನ ಲೇಖಕರು 1944ರಲ್ಲಿ ಈ ಸಂಬಂಧ ನಿರ್ಣಯವೊಂದನ್ನು ಅಂಗೀಕರಿಸಿದರು. ನಂತರ ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಅವರ ಎಲ್ಲಾ ಕೃತಿಗಳು 1950ರಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದರು. ನಮ್ಮ ಸರ್ಕಾರ ಕೂಡ ಹೀಗೇ ಮಾಡಬಹುದು.

ವಸಂತರಾಜು ಎನ್., ತಲಕಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT