ಭಾನುವಾರ, ಅಕ್ಟೋಬರ್ 25, 2020
21 °C

ಮುಂಚಿನ ಸ್ಥಿತಿಯೇ ಇರಲಿ!

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕದ ನಗರಗಳು ಅಭಿವೃದ್ಧಿ ಆಗುತ್ತವೆಂದು ತಿಳಿದಾಗ ಸಂತೋಷವಾಗಿತ್ತು. ನಮ್ಮ ನಗರಗಳು ಸಿಂಗಪುರ ಮತ್ತು ಹಾಂಗ್‌ಕಾಂಗ್‌ನಂತೆ ಸ್ವಚ್ಛವಾಗಿ ನಳನಳಿಸುವಂತೆ ಕನಸು ಕಂಡಿದ್ದೆವು. ಯೋಜನೆಯಡಿ ಕಾಮಗಾರಿಗಳು ಪ್ರಾರಂಭವಾದಾಗ ಕೌತುಕದಿಂದ ಹುಬ್ಬೇರಿಸಿ, ಎದೆಯೇರಿಸಿ ಸಂಭ್ರಮಿಸಿದ್ದೆವು. ಕಾಮಗಾರಿ ಮುಂದುವರಿದಂತೆ ಅದರ ಆಮೆ ವೇಗದ ಪ್ರಗತಿಯಿಂದ ಅನನುಕೂಲಗಳನ್ನು ಅನುಭವಿಸಿದಂತೆ ನಮ್ಮ ಸಂಭ್ರಮ, ಸಂತಸ, ಕುತೂಹಲ ಮತ್ತು ಕನಸುಗಳು ಒಂದೊಂದಾಗಿ ಮರೆಯಾಗತೊಡಗಿದವು. ಈಗ ನಿರಾಸೆ ಮತ್ತು ಅಸಹನೆ ಮಡುಗಟ್ಟಿವೆ.

ಈ ಎಲ್ಲಾ ಕೆಲಸಗಳನ್ನು ಕೂಡಲೇ ನಿಲ್ಲಿಸಿ, ನಮ್ಮ ರಸ್ತೆಗಳು ಮತ್ತು ಬಡಾವಣೆಗಳನ್ನು ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಾರಂಭವಾಗುವುದಕ್ಕೆ ಮುಂಚೆ ಇದ್ದ ಸ್ಥಿತಿಗೆ ತಂದರೆ ಸಾಕಪ್ಪ ಅನ್ನಿಸಿದೆ.

ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.