ಮಂಗಳವಾರ, ಜನವರಿ 26, 2021
24 °C

ಯುವಸಮೂಹ ರಾಜಕೀಯಕ್ಕೆ ಬರಲಿ

ಟಿ.ಎಸ್.ಪ್ರತಿಭಾ, ಚಿತ್ರದುರ್ಗ Updated:

ಅಕ್ಷರ ಗಾತ್ರ : | |

ಕೇರಳದ ತಿರುವನಂತಪುರ ಮಹಾನಗರಪಾಲಿಕೆಯ ಮೇಯರ್ ಸ್ಥಾನಕ್ಕೆ 21 ವರ್ಷದ ಆರ್ಯ ರಾಜೇಂದ್ರನ್ ಅವರನ್ನು ಸಿಪಿಎಂ ಜಿಲ್ಲಾ ಸಮಿತಿಯು ಶಿಫಾರಸು ಮಾಡಿರುವುದು (ಪ್ರ.ವಾ., ಡಿ. 26) ಸಂತೋಷದ ವಿಷಯ. ಆರ್ಯ ಅವರಂತೆ ಇಂದಿನ ಯುವಸಮೂಹವು ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಆಗಬೇಕು. ಹಾಗೆಯೇ 65 ವರ್ಷಕ್ಕೆ ರಾಜಕಾರಣಿಗಳನ್ನು ರಾಜಕೀಯದಿಂದ ನಿವೃತ್ತಿಗೊಳಿಸುವ ಕಾನೂನು ಜಾರಿಗೆ ಬರಬೇಕು. ‘ಹೊಸ ಚಿಗುರು, ಹಳೇ ಬೇರು ಕೂಡಿರಲು ಮರ ಸೊಬಗು’ ಎನ್ನುವ ಕವಿವಾಣಿಯಂತೆ ಅನುಭವಿ ರಾಜಕಾರಣಿಗಳು ಯುವ ರಾಜಕಾರಣಿಗಳಿಗೆ ದೇಶದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡುತ್ತಾ ಬರಲಿ. ಒಟ್ಟಾರೆ ಇಂದಿನ ಯುವಶಕ್ತಿಯು ದೇಶವನ್ನು ಅಭಿವೃದ್ಧಿ ಪಥದ ಕಡೆ ಕೊಂಡೊಯ್ಯುವ ಆಶಾಕಿರಣವಾಗಲಿ.

–ಟಿ.ಎಸ್.ಪ್ರತಿಭಾ, ಚಿತ್ರದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು