ಬುಧವಾರ, ಅಕ್ಟೋಬರ್ 28, 2020
23 °C

ವಾಚಕರ ವಾಣಿ: ಕಾನೂನು ತಿದ್ದುಪಡಿಗೆ ಸಲಹೆ ನೀಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ರೇರಾ) ಅಡಿ ನೋಂದಾಯಿಸಿದ ಯೋಜನೆಗಳು ಗಡುವಿನೊಳಗೆ ಮುಗಿಯದೆ ಖರೀದಿದಾರರಿಗೆ ‘ಮನೆಯೂ ಇಲ್ಲ, ಹಣವೂ ಇಲ್ಲ’ ಎಂಬ ವರದಿಯು (ಪ್ರ.ವಾ., ಆ. 25) ಮುಂಗಡ ಹಣ ಪಾವತಿಸಿ ಮನೆಗಾಗಿ ಕಾಯುತ್ತಿರುವವರ ಅಳಲನ್ನು ತೆರೆದಿಟ್ಟಿದೆ. ಬಿಲ್ಡರ್‌ಗಳ ಬೇಜವಾಬ್ದಾರಿಗೆ ರೇರಾವನ್ನು ದೂರುವುದು ಸರಿಯಲ್ಲ ಎಂದು ರೇರಾದ ಕಾರ್ಯದರ್ಶಿ ಹೇಳಿದ್ದಾರೆ. ಇದರಿಂದ, ಬಿಲ್ಡರ್‌ಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡಂತೆ ಆಯಿತಲ್ಲವೇ? ಅದಕ್ಕಾಗಿ ಪ್ರಾಧಿಕಾರವನ್ನಲ್ಲದೆ ಮತ್ಯಾರನ್ನು ದೂರಬೇಕು?

ರೇರಾ ಆದೇಶಿಸಬಹುದೇ ವಿನಾ ಜಾರಿಗೊಳಿಸಬೇಕಾದುದು ಕಂದಾಯ ಇಲಾಖೆ ಮತ್ತು ಪ್ರಾಜೆಕ್ಟ್‌ನ ಸಮಯ ವಿಸ್ತರಿಸುವಾಗ ಗ್ರಾಹಕರನ್ನು ಕೇಳಲೇಬೇಕೆಂದೇನೂ ಕಾಯ್ದೆಯಲ್ಲಿ ಇಲ್ಲ ಎಂಬ ಹೇಳಿಕೆಗಳು ಅವರ ಅಸಹಾಯಕತೆಯನ್ನೋ ಇಲ್ಲವೇ ರೇರಾ, ಬಿಲ್ಡರ್‌ಗಳ ಪರ ಇದೆಯೇ ಎಂಬ ಸಂದೇಹವನ್ನೋ ಸೂಚಿಸುತ್ತವೆ. ಪ್ರಾಜೆಕ್ಟ್‌ನ ಸಮಯ ವಿಸ್ತರಿಸುವಾಗ ಖರೀದಿದಾರರ ಅಭಿಪ್ರಾಯವನ್ನು ಆಲಿಸಬೇಕಾಗಿದ್ದುದು ನ್ಯಾಯಸಮ್ಮತವಲ್ಲವೇ? ತನ್ನ ಆದೇಶವನ್ನು ಜಾರಿಗೊಳಿಸಲು ಅಡ್ಡಿಯಿದೆ ಎಂದಾದರೆ, ಕಾನೂನಿನ ತಿದ್ದುಪಡಿಗೆ ಸರ್ಕಾರಕ್ಕೆ ಅದು ಸಲಹೆ ನೀಡಬಾರದೇಕೆ?

-ಪುಟ್ಟೇಗೌಡ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು