ಸ್ವದೇಶದ ಸಮಸ್ಯೆಗಳತ್ತ ಗಮನಹರಿಸಲಿ

7

ಸ್ವದೇಶದ ಸಮಸ್ಯೆಗಳತ್ತ ಗಮನಹರಿಸಲಿ

Published:
Updated:

ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಗಾದರೂ ಕೆಲಮಟ್ಟಿಗೆ ಅನಿರೀಕ್ಷಿತ. ಅತಿ ಆತ್ಮವಿಶ್ವಾಸದ ಮಾತು, ಮಷಿನರಿ ಅಷ್ಟೇ ಸಾಲದು. ಕೆಲಸ (ಮಾಡಿದ್ದರೆ) ನೆಲದ ಮೇಲೆ ಕಾಣಬೇಕು ಎಂಬುದರ ಅರಿವು ಸದಾ ಇರಬೇಕಾಗುತ್ತದೆ. ಮಧ್ಯಪ್ರದೇಶ, ಛತ್ತೀಸಗಡದಲ್ಲಿ ಭ್ರಮನಿರಸನ ವ್ಯಕ್ತವಾಗಲು 15 ವರ್ಷ ಬೇಕಾಯಿತು. ಆದರೆ ರಾಜಸ್ಥಾನದಲ್ಲಿ ಒಂದೇ ಅವಧಿಯಲ್ಲಿ ರೈತ ಮತ್ತಿತರ ವರ್ಗದವರು ಬೇಸತ್ತರು. ಕರ್ನಾಟಕದ ಕುಮಾರಸ್ವಾಮಿ ಅವರ ವಿಷಯದಲ್ಲಿ ಮುಂದಿನ ವರ್ಷದ ಮೇ ಹೊತ್ತಿಗೇ ಹೀಗಾಗಬಹುದೆ!?

ಉಳಿದಿರುವ ಅವಧಿಯಲ್ಲಿ ಕೇಂದ್ರ ಸರ್ಕಾರ, ಮತ್ತದರ ಮಂತ್ರಿಗಳು ಹೊಸ ಘೋಷಣೆ, ಕಾರ್ಯಕ್ರಮಗಳ ಅಥವಾ ರಾಮಮಂದಿರ ನಿರ್ಮಾಣದಂತಹ ವಿಷಯದ ಮೊರೆ ಹೋಗದೆ, ಅನುಷ್ಠಾನವಾಗದೆ ಬಾಕಿ ಉಳಿದಿರುವ ಕೆಲಸಗಳನ್ನಾದರೂ ಮುಗಿಸಲಿ. ಅನುಭವ, ಕಾರ್ಯಕ್ಷಮತೆ ಇರುವವರೂ ನಾಯಕರ ಮುಖಸ್ತುತಿಯಲ್ಲಿ ತೊಡಗಿರುವುದು ವಿಷಾದಕರ. ಮಹಾನಾಯಕರು ‘ಗ್ಲೋಬಲ್’ ಆಗುವುದಕ್ಕಿಂತ ಸ್ವದೇಶದ ಸಮಸ್ಯೆಗಳತ್ತ ಗಮನ ಹರಿಸಲಿ. ತೆರೆದ ಮನ ಇದ್ದರೆ ಪ್ರತೀ ಘಟನೆಯಿಂದಲೂ ಕಲಿಯಬಹುದಾದ ಒಂದಾದರೂ ಪಾಠ ಇರುತ್ತದೆ.

ಎಚ್.ಎಸ್. ಮಂಜುನಾಥ, ಬೆಂಗಳೂರು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !