ಸೋಮವಾರ, ಜುಲೈ 4, 2022
22 °C

ವಾಚಕರ ವಾಣಿ | ಪೋಲಾಗುತ್ತಿದೆ ಮಾನವ ಸಂಪನ್ಮೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಮಿಕರಿಗೆ ವೇತನ ಹಂಚಿಕೆಯಲ್ಲಿರುವ ಅಸಮಾನತೆ ಕುರಿತ ಅಂಕಿ ಅಂಶಗಳನ್ನೊಳಗೊಂಡ ವರದಿಯನ್ನು (ಪ್ರ.ವಾ., ಮೇ 23) ಓದಿ ಚಕಿತನಾದೆ. ಇದು, ದೇಶದಲ್ಲಿರುವ ಆರ್ಥಿಕ ಅಸಮಾನತೆಯ ಸ್ಪಷ್ಟ ಚಿತ್ರಣ ನೀಡಿದೆ. ದೇಶದ ಪ್ರಗತಿಗೆ ಕಾರ್ಮಿಕ ಶಕ್ತಿ ಪೂರಕ. ಆದರೆ ನಮ್ಮಲ್ಲಿ ಮಾನವ ಸಂಪನ್ಮೂಲ ಯೋಜನೆ ಇದ್ದಂತೆ ಕಾಣುವುದಿಲ್ಲ. ಇದರಿಂದಾಗಿ ಆ ಶಕ್ತಿಯು ವೃಥಾ ಪೋಲಾಗುತ್ತಿದೆ. ಇರುವಂಥ ಕಾರ್ಮಿಕರೂ ಸರಿಯಾದ ವೇತನ ಪಡೆಯದಿರುವುದು ಕಟುವಾಸ್ತವ.

ಒಂದು ಕಡೆ ಸಾಮಾಜಿಕ ಅಸಮಾನತೆ, ಇನ್ನೊಂದು ಕಡೆ ಆರ್ಥಿಕ ಅಸಮಾನತೆ. ಇವೆರಡೂ ರಾಜಕೀಯ ಅಧಿಕಾರದ ಅಸ್ತ್ರವು ಕೆಲವರಲ್ಲಷ್ಟೇ ಕೇಂದ್ರೀಕೃತವಾಗುವಂತೆ ಮಾಡಿವೆ. ಇದು ಹೀಗೇ ಮುಂದುವರಿದರೆ ಸಾಮಾನ್ಯ ಜನರ ಸ್ಥಿತಿ ಕರುಣಾಜನಕ ಆಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ, ಅಧಿಕಾರವನ್ನು ಅಸಮಾನತೆ ನಿವಾರಣೆಗಾಗಿ ಬಳಸಬೇಕಾದ ಜರೂರತ್ತು ಎಂದಿಗಿಂತ ಇಂದು ಇದೆ.
–ಬಿ.ಆರ್.ಅಣ್ಣಾಸಾಗರ, ಸೇಡಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.