ಗಿಡ ನೆಡುವ ಕಾರ್ಯಕ್ರಮದ ಬಗ್ಗೆ ವಿಶ್ಲೇಷಿಸಿರುವ (ಪ್ರ.ವಾ., ಜುಲೈ 19) ಡಾ. ಸಂಜಯ್ ಗುಬ್ಬಿ ಅವರು ಈ ಕಾರ್ಯದಲ್ಲಿ ಜನರ ಪಾಲ್ಗೊಳ್ಳುವಿಕೆಯಿಂದ ಉಂಟಾಗುವ ಸಮಸ್ಯೆಗಳನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಲೇಖನ ಮಾಹಿತಿಯುಕ್ತವಾಗಿದೆ. ಆದರೆ ಜನಸಾಮಾನ್ಯರು ಏನು ಮಾಡಬೇಕು ಎಂಬ ವಿಚಾರವನ್ನು ಅವರು ತಿಳಿಸಿಲ್ಲ. ಈ ದಿಸೆಯಲ್ಲಿ ಅರಣ್ಯ ಅಧಿಕಾರಿಗಳು ಜನರಿಗೆ ಸೂಕ್ತ ಮಾರ್ಗದರ್ಶನ ಕೊಡಬಹುದಲ್ಲವೇ?

ನಗರಗಳ ಆಸುಪಾಸು ಗಿಡಗಳನ್ನು ನೆಟ್ಟ ಕೂಡಲೇ ಆ ಪ್ರದೇಶದ ಜೀವವೈವಿಧ್ಯ ನಾಶವಾಗುವುದೇ? ಹಾಗಾದರೆ ಅರಣ್ಯ ನಾಶದಿಂದಾಗುತ್ತಿರುವ ಜೀವವೈವಿಧ್ಯ ಹಾನಿಗೆ ಪರಿಹಾರೋಪಾಯಗಳೇನು? ಈ ವಿವರಗಳೂ ಇದ್ದಿದ್ದರೆ ಲೇಖನಕ್ಕೆ ಸಮಗ್ರತೆ ದಕ್ಕುತ್ತಿತ್ತು. ಜನಸಾಮಾನ್ಯರಿಂದ ವೈಜ್ಞಾನಿಕವಾಗಿ ಅರಣ್ಯ ನಿರ್ಮಿಸುವುದು ಸಾಧ್ಯವೇ ಎಂಬ ಪ್ರಶ್ನೆಯೂ ಏಳುತ್ತದೆ.ಆಲ, ಅರಳಿ, ಬಸರಿ ಮುಂತಾದ ಗಿಡಗಳು ರಾಜ್ಯದೆಲ್ಲೆಡೆ ಬೆಳೆಯುತ್ತವೆ. ಅವು ನೂರಾರು ಜೀವಿಗಳಿಗೆ ಆಶ್ರಯ ನೀಡುತ್ತವಲ್ಲವೇ? ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳಿಂದ ಆಗುತ್ತಿರುವ ಹಾನಿಯ ವಿಶ್ಲೇಷಣೆ ಏನು?

– ಡಾ. ಎಸ್.ಶಿಶುಪಾಲ,ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.