ಗುರುವಾರ , ಜನವರಿ 30, 2020
19 °C

ಬಾಲ್ಯವಿವಾಹ: ವ್ಯತಿರಿಕ್ತ ಪರಿಣಾಮ ಅರಿವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲ್ಯವಿವಾಹ: ವ್ಯತಿರಿಕ್ತ ಪರಿಣಾಮ ಅರಿವಾಗಲಿ

ರಾಜ್ಯದಲ್ಲಿ ಬಾಲತಾಯಂದಿರ ಸಮೀಕ್ಷೆ ನಡೆಸಬೇಕಾದ ಅಗತ್ಯವನ್ನು ಸಂಪಾದಕೀಯ (ಪ್ರ.ವಾ., ಡಿ. 12) ಪ್ರತಿಪಾದಿಸಿದೆ. ಬಾಲ್ಯವಿವಾಹ ಮಾಡುವ ಮೂಲಕ ಆ ಹೆಣ್ಣುಮಕ್ಕಳಿಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ನಿರಾಕರಿಸಲಾಗಿದೆ. ಇಪ್ಪತೊಂದನೆಯ ಶತಮಾನದಲ್ಲಿಯೂ ಈ ರೀತಿ ಬಾಲ್ಯವಿವಾಹ ಮಾಡುತ್ತಿರುವುದು ವಿಷಾದನೀಯ. ಈ ಮಕ್ಕಳು ತಮ್ಮ ಸುಂದರವಾದ ಬಾಲ್ಯದಿಂದ ವಂಚಿತರಾಗುತ್ತಿದ್ದಾರೆ. ಇದು, ಇಡೀ ಸಮಾಜ ತಲೆತಗ್ಗಿಸಬೇಕಾದಂಥ ಸಂಗತಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇನ್ನಾದರೂ ಎಚ್ಚೆತ್ತು ಬಾಲತಾಯಂದಿರ ಸಮೀಕ್ಷೆ ನಡೆಸಬೇಕು. ಅವರ ಆರೋಗ್ಯ ಮತ್ತು ಹಕ್ಕುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಬಾಲ್ಯವಿವಾಹ ತಡೆ ಸಮಿತಿ ರಚಿಸಬೇಕು. ಬಾಲ್ಯವಿವಾಹ ಮಾಡಲು ಬಯಸಿರುವವರಿಗೆ ಕಾನೂನಿನ ಸ್ಪಷ್ಟ ಅರಿವಿನ ಜೊತೆಗೆ, ಇದರಿಂದ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಕುರಿತೂ ಅರಿವು ಮೂಡಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಪ್ರಯತ್ನ ಶ್ಲಾಘನೀಯ.

– ಮಂಜುನಾಥ್ ಎಂ., ಶಿವಮೊಗ್ಗ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು