ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚರಕ ವಾಣಿ | ಬೋಟ್ ವ್ಯವಸ್ಥೆ ಕಲ್ಪಿಸಿ!

Last Updated 6 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಈ ಬಾರಿಯ ಮುಂಗಾರಿನ ಆರ್ಭಟ ಬಹಳ ಬಿರುಸಾಗಿದ್ದು, ಇಡೀ ಕರುನಾಡನ್ನು ಜಲಾಘಾತದಿಂದ ನಲುಗಿಸಿದೆ. ಕೋಡಿ ಬಿದ್ದಿರುವ ಕೆರೆ ಕಟ್ಟೆಗಳು, ನಾವು ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಮುಂದೆ ಹೋಗಲಾರೆವು ಎಂಬುದನ್ನು ಮತ್ತೆ ತೋರಿಸಿಕೊಟ್ಟಿವೆ. ಬೆಂಗಳೂರಿನ ಒಂದಷ್ಟು ಭಾಗಗಳು ದ್ವೀಪದಂತೆ ಆಗಿರುವುದು ನಮ್ಮ ದುರಾಸೆಯ ಫಲವೇ ಆಗಿದೆ. ಕೆರೆಗಳಿದ್ದ ಪ್ರದೇಶಗಳಲ್ಲಿ ಬಡಾವಣೆಗಳು ತಲೆ ಎತ್ತಿರುವುದರ ಪರಿಣಾಮ ಏನೆಂಬುದು ಈ ರೀತಿಯ ರಣಭಯಂಕರ ಮಳೆ ಆದಾಗ ನಮಗೆ ಎದ್ದು ಕಾಣುತ್ತದೆ.

ಈಗ ನಾವು ಆ್ಯಪ್‌ಗಳ ಮೂಲಕ ವಾಹನಗಳನ್ನು ಬುಕ್ ಮಾಡಿ ಸಂಚಾರ ಮಾಡುತ್ತಿದ್ದೇವೆ. ಸರ್ಕಾರಗಳು ದೋಣಿಗಳನ್ನು ಅಭಿವೃದ್ಧಿಪಡಿಸಿ ಮಳೆಗಾಲದಲ್ಲಿ ಸಂಚರಿಸಲು ಅನುಕೂಲವಾಗುವಂತೆ ಆ್ಯಪ್‌ ಸೌಲಭ್ಯ ಕಲ್ಪಿಸಬೇಕು. ಇದರಿಂದ ಮಳೆಗಾಲದಲ್ಲಿ ಬೆಂಗಳೂರಿನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ!

ಹರವೆ ಸಂಗಣ್ಣ ಪ್ರಕಾಶ್,ಹರವೆ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT