ಸೋಮವಾರ, ಸೆಪ್ಟೆಂಬರ್ 26, 2022
22 °C

ವಾಚಕರ ವಾಣಿ| ಆಡಳಿತ ನೇರ್ಪುಗೊಳ್ಳಬೇಕೆಂದರೆ...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ರಾಜ್ಯದಲ್ಲೂ ಭ್ರಷ್ಟಾಚಾರಮುಕ್ತ, ಅಭಿವೃದ್ಧಿಪರ ಸರ್ಕಾರದ ಅಗತ್ಯ ಇದೆ’ ಎಂದು ಉದ್ಯಮಿ ಮೋಹನದಾಸ್ ಪೈ ಅವರು ಟ್ವೀಟ್ ಮೂಲಕ ಪ್ರಧಾನಿಯನ್ನು ಕೋರಿದ್ದಾರೆ. ‘ನೀವು ದೆಹಲಿಯಿಂದ ನಡೆಸುತ್ತಿರುವ ಭ್ರಷ್ಟಾಚಾರಮುಕ್ತ ಸರ್ಕಾರವು ಇಲ್ಲಿಯೂ ಬೇಕು’ ಎಂಬುದು ಪೈ ಅವರ, ಅಂತೆಯೇ ಸಾಮಾನ್ಯ ಜನರ ಅಪೇಕ್ಷೆ ಕೂಡ. ಶೇ 40ರಷ್ಟು ಕಮಿಷನ್ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಪ್ರಧಾನಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಪ್ರಮುಖರ ಸಭೆಯಲ್ಲಿ ಪ್ರಸ್ತಾಪ ಮಾಡುವುದು ಅಗತ್ಯ.

ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಿಂದ ಮಾತನಾಡಿದ ಪ್ರಧಾನಿ, ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿದ್ದಾರೆ. ಈ ಯುದ್ಧವನ್ನು ಅವರು ಕರ್ನಾಟಕದಿಂದ ಪ್ರಾರಂಭಿಸಲಿ. ಮೊದಲು ಪಕ್ಷದಲ್ಲಿ ಧಂಡಿಯಾಗಿ ಸಂಗ್ರಹವಾಗಿರುವ ಕೊಳಕುಗಳನ್ನು, ಹಳಸಿದವರನ್ನು ಮುಲಾಜಿಲ್ಲದೆ ತೆಗೆದುಹಾಕುವ ಪ್ರಕ್ರಿಯೆಯಿಂದ ಬಿಜೆಪಿಯ ಶುದ್ಧೀಕರಣವನ್ನು ಪ್ರಾರಂಭಿಸುವುದು ಮುಖ್ಯ. ಪ್ರಧಾನಿ ಈ ಬಗ್ಗೆ ಸಂದೇಹಾತೀತವಾದ ಆದೇಶವನ್ನು ಪಕ್ಷಕ್ಕೆ ನೀಡುವುದಲ್ಲದೆ, ಅದರ ಅನುಷ್ಠಾನದ ಬಗ್ಗೆ ನಿಗಾ ವಹಿಸಬೇಕು. ಅದರಿಂದ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸಾಧ್ಯ. ಇದಾದಾಗ ಆಡಳಿತ ನೇರ್ಪುಗೊಳ್ಳುತ್ತದೆ. ಜನರಲ್ಲಿ ಭರವಸೆ ಮೂಡುತ್ತದೆ. ಆಸೆ, ಅಪೇಕ್ಷೆಗಳು ಬೇಕಾದಷ್ಟಿವೆ. ಅವುಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಪೂರೈಸುವವರು ಎಲ್ಲಿದ್ದಾರೆ? ಇದು ಈಗ ಜನರ ಮುಂದಿರುವ ಪ್ರಶ್ನೆ.

- ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು