ಬುಧವಾರ, ಜನವರಿ 22, 2020
25 °C

ಅಧ್ಯಕ್ಷತೆ: ಸಲ್ಲದ ಅಪಸ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ವಿಚಾರದಲ್ಲಿ ಕಲಬುರ್ಗಿಯ ಕೆಲವರು ಸ್ಥಳೀಯ ಪ್ರಾತಿನಿಧ್ಯದ ನೆಪದಲ್ಲಿ ಅಧ್ಯಕ್ಷರ ಆಯ್ಕೆಗೆ ಅಪಸ್ವರ ಎತ್ತಿರುವುದು ಸರಿಯಲ್ಲ. ಸಮ್ಮೇಳನವನ್ನು ನಡೆಸಲು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅವಕಾಶ ಸಿಗಬೇಕೆಂಬ ಧ್ವನಿಗೆ ಎಲ್ಲರೂ ಓಗೊಡಬಹುದು. ಆದರೆ ಸಮ್ಮೇಳನದ ಅಧ್ಯಕ್ಷತೆಯನ್ನು ಅದೇ ಜಿಲ್ಲೆ ಅಥವಾ ಅದೇ ಭಾಗದವದರು ವಹಿಸಬೇಕು ಎಂಬುದು ಸಲ್ಲದ ನುಡಿ. ಕನ್ನಡ ನಾಡು-ನುಡಿಯ ಈ ಹಬ್ಬದಲ್ಲಿ ಹೊರ ಜಿಲ್ಲೆಯವರೇ ಅಧ್ಯಕ್ಷರಾಗಲಿ. ಅದುವೇ ಅಖಂಡ ಕರ್ನಾಟಕದ ಮೂಲ ಮಂತ್ರ.

ಗಣಪತಿ ನಾಯ್ಕ, ಕಾನಗೋಡ

 

ಪ್ರತಿಕ್ರಿಯಿಸಿ (+)