ಸಂಸದರು ಸೈಕಲ್ ಸವಾರಿಯ ಕಲ್ಪನೆಯನ್ನು ಸಂಸತ್ನಿಂದ ತಮ್ಮ ಮತಕ್ಷೇತ್ರಕ್ಕೆ ವಿಸ್ತರಣೆ ಮಾಡಿಕೊಂಡರೆ ಗ್ರಾಮ ಪಂಚಾಯಿತಿಯಿಂದ ಆರಂಭಿಸಿ ವಿವಿಧ ಹಂತದ ಜನಪ್ರತಿನಿಧಿಗಳು ಹಾಗೂ ಯುವಕರಿಗೆ ಮಾರ್ಗ ತೋರಿದಂತಾಗುತ್ತದೆ ಎಂಬುದು ನಾಗೇಶ ಹೆಗಡೆ ಅವರ ಆಶಯ (ಪ್ರ.ವಾ., ಜುಲೈ 24). ಇದು ಅದ್ಭುತ ಆಲೋಚನೆ ಹಾಗೂ ವಿನೂತನ ಪ್ರಯೋಗ ಕೂಡ!

ಪ್ರಸ್ತುತ ಹೆಚ್ಚುತ್ತಿರುವ ಜನರ ಶಿಕ್ಷಣದ ಮಟ್ಟದ ಜೊತೆಗೆ ‘ಪೂರಕ ಮಾಧ್ಯಮಗಳ’ ಅನುಕೂಲಗಳಿಂದ ಇಡೀ ಪ್ರಪಂಚದ ಮಾಹಿತಿಗಳು ಬೆರಳ ತುದಿಗೆ ಬಂದು ನಿಂತಿವೆ. ಇದರಿಂದ ಜನರ ಬೌದ್ಧಿಕ ಜ್ಞಾನವು ಪರಿಸರ ಕಾಳಜಿಯನ್ನು ಕೂಡ ಇಮ್ಮಡಿಗೊಳಿಸಿದೆ. ಈ ವಿಚಾರದಲ್ಲಿ ರಾಜಕಾರಣಿಗಳು ಜನರಿಗೆ ಮಾದರಿಯಾಗುತ್ತಾರೆ ಎಂದು ನಿರೀಕ್ಷೆ ಮಾಡುವ ಅವಶ್ಯಕತೆ ಬರುವುದಿಲ್ಲ. ಆದರೆಅಗತ್ಯವಾಗಿ ಆಗಬೇಕಾಗಿರುವುದು ನಗರಗಳಲ್ಲಿ ಸುರಕ್ಷಿತವಾಗಿ ಸೈಕಲ್ನಲ್ಲಿ ಸಂಚರಿಸಲು ಬೇಕಾದ ಅನುಕೂಲಗಳಷ್ಟೆ. ಈ ವಿಚಾರವಾಗಿ, ರಾಜಕೀಯ ಪಕ್ಷಗಳು ಸರ್ಕಾರಗಳ ಮೇಲೆ ಒತ್ತಡ ತಂದು ಪ್ರತ್ಯೇಕ ಸೈಕಲ್ ಲೇನ್ ರೂಪಿಸುವಂತೆ ಮಾಡಿದರೆ, ದಿನನಿತ್ಯ ಬೆಂಗಳೂರಿನ ರಸ್ತೆಗಳಲ್ಲಿ ಲಕ್ಷಾಂತರ ಜನರು ಸೈಕಲ್ಗಳಲ್ಲಿ ಸಂಚರಿಸುವುದನ್ನು ಕಾಣಬಹುದು.ರಾಜಕೀಯ ಪಕ್ಷಗಳು ಇದನ್ನೂ ಒಂದು ‘ವೋಟು ಬ್ಯಾಂಕ್’ ಮಾಡಿಕೊಳ್ಳಲು ಇಂಥ ಸಾಮಾಜಿಕ ನಡೆಗೆ ಮುಂದಾಗಬಹುದಲ್ಲವೇ?

- ಡಾ. ಜಿ.ಬೈರೇಗೌಡ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.