ಗುರುವಾರ , ಸೆಪ್ಟೆಂಬರ್ 23, 2021
27 °C

ಮೇಲುಸಂಪಾದನೆಗೆ ಕಡಿವಾಣ ಹಾಕಬೇಕೆಂದರೆ...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಸರ್ಕಾರಿ ಕೆಲಸವೆಂದರೆ ಮೇಲುಸಂಪಾದನೆಗೆ ಸರಳವಾದ ಮಾರ್ಗ ಎಂಬ ಮನೋಭಾವ ಸಮಾಜದಲ್ಲಿದೆ ಎಂದು ರಾಜಕುಮಾರ ಕುಲಕರ್ಣಿ ಬರೆದಿದ್ದಾರೆ (ಸಂಗತ, ಜುಲೈ 24). ಕೆಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದ ತಕ್ಷಣ ಜನ ‘ಓಹ್‌ ಇವರು ಸುಮ್ನೆ ಇದ್ದರೂ ದುಡ್ಡು ಬರ್ತಾ ಇರತ್ತೆ, ಖರ್ಚಿಗಂತೂ ಮೋಸವಿಲ್ಲ, ಬರುವ ಸಂಬಳವನ್ನು ಬೇರೆ ಕಡೆ ಹೂಡಿಕೆ ಮಾಡಬಹುದು’ ಎನ್ನುವ ಸುಲಭ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆ ನೌಕರ ‘ಇಲ್ಲ ಇಲ್ಲ, ನಾನು ಆ ರೀತಿ ಏನೂ ತಗೊಳ್ಳಲ್ಲ, ಸಂಬಳದಲ್ಲೇ ನಮ್ಮ ಜೀವನ’ ಅಂದರೂ, ‘ಹೇ ಯಾರೂ ಸಾಚಾ ಅಲ್ಲ. ಬಂದದ್ದನ್ನು ಬೇಡ ಅನ್ನದೆ, ಬರೋವಾಗ ಸಿಕ್ಕಷ್ಟು ಗಳಿಸಿ ಆರಾಮಾಗಿರಿ’ ಅನ್ನುವ ಉತ್ತರ ಬರುತ್ತದೆ.

ಬರುವ ವೇತನದಲ್ಲೇ ನ್ಯಾಯಯುತವಾಗಿ ಜೀವನ ಸಾಗಿಸುತ್ತಿರುವ ಅದೆಷ್ಟೋ ನೌಕರರು ಇದ್ದಾರೆ. ಅವರ ಸೇವೆಯನ್ನು ಸರ್ಕಾರ ಗುರುತಿಸಬೇಕು. ಅಂಥವರ ದಕ್ಷತೆಗೆ ಸೂಕ್ತ ಮನ್ನಣೆ ನೀಡಿದರೆ ಲಂಚದ ಹಾವಳಿಗೆ ಕಡಿವಾಣ ಹಾಕಬಹುದೇನೋ.

- ಮಧು ಎನ್.ಬಿ., ನಾರನಹಳ್ಳಿ, ದೊಡ್ಡಬಳ್ಳಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.