ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ತಿಳಿದಾಗ, ಹಿಂದೆ ಆರೋಪಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಕೇಳಿದಾಗಲೂ ‘ಒಳ್ಳೆಯ ದಿನ’ದವರೆಗೆ ಕಾಲ ತಳ್ಳಿದ್ದುದು, ಸಂಖ್ಯಾಬಲ ಇಲ್ಲದಾಗಲೂ ಆರು ದಿನದ ಮುಖ್ಯಮಂತ್ರಿ ಆಗಿದ್ದುದು ಎಲ್ಲ ನೆನಪಾಯಿತು. ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದಕ್ಕಿಂತ ಯಡಿಯೂರಪ್ಪನವರು ತಮ್ಮ ನಾಲ್ಕು ದಶಕಗಳ ರಾಜಕಾರಣದಲ್ಲಿ ಹೊಸ ರಾಜಕೀಯ ಸಂಸ್ಕೃತಿಯನ್ನು ತರಲು ಯತ್ನಿಸಿದರೇ ಎಂಬ ಪ್ರಶ್ನೆ ಹೆಚ್ಚು ಮುಖ್ಯ, ಪ್ರಸ್ತುತ.

ಅಕಾಡೆಮಿ (ಚಲನಚಿತ್ರವೂ ಸೇರಿದಂತೆ), ನಿಗಮ, ಮಂಡಳಿಗಳ ಕೆಲವು ನೇಮಕಗಳು ಅನರ್ಹರಿಗೆ ಮಣೆ ಹಾಕಿದಂತಿದ್ದವು. ಅಧಿಕಾರಿಗಳ ವರ್ಗಾವರ್ಗಿಯಲ್ಲೂ ಆಸಕ್ತ ಹಿತಗಳ ಕೈವಾಡ ಇತ್ತು. ಅವರ ಸೆಕ್ರೆಟೇರಿಯಟ್‌ಗೆ ಕಳುಹಿಸಿದ ದೂರುಗಳಿಗೆ ಸ್ವೀಕೃತಿ ಕೂಡ ಸಿಗುತ್ತಿರಲಿಲ್ಲ.

ಒಂದೇ ಮೆಚ್ಚುಗೆಯ ಅಂಶ- ಈ ವಯಸ್ಸಿನಲ್ಲೂ ಸಾಕಷ್ಟು ಚಟುವಟಿಕೆಯಿಂದಿದ್ದಾರೆ. ಸಕ್ರಿಯ ರಾಜ
ಕಾರಣದಲ್ಲಿದ್ದೇ ರಾಜ್ಯಕ್ಕೆ ಸೇವೆ ಸಲ್ಲಿಸಬೇಕೆ- ಅವರಿಗೆ ಬಿಟ್ಟ ವಿಷಯ. ಒಟ್ಟಿನಲ್ಲಿ ಅವರ ಅಧಿಕಾರ ಪರ್ವವಂತೂ
ಅಂತ್ಯಗೊಂಡಿದೆ.

-ಎಚ್.ಎಸ್.ಮಂಜುನಾಥ,ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.