ಮುಜರಾಯಿ ದೇವಾಲಯಗಳಲ್ಲಿ ಆನ್‌ಲೈನ್ ಸೇವೆ ಆರಂಭಿಸಲು ಸಕಾ೯ರ ಚಿಂತನೆ ನಡೆಸಿದೆ. ಆದರೆ ಮನೆಯೇ ಮಂದಿರ ಆಗಲು ಸಾಧ್ಯವಿಲ್ಲ. ಮಾನಸಿಕ ಶಾಂತಿ, ನೆಮ್ಮದಿಗಾಗಿ ತೀರ್ಥಕ್ಷೇತ್ರಗಳ ದರ್ಶನ ಮಾಡುತ್ತೇವೆ. ದೇವರ ಮೂರ್ತಿಯ ಎದುರು ನಿಂತು, ಕ್ಷಣಕಾಲ ಏಕಾಗ್ರತೆಯಿಂದ ಧ್ಯಾನ, ಪ್ರಾರ್ಥನೆ ಮಾಡಿದಾಗ ಸಿಗುವ ಪರಮಾನಂದ ವರ್ಣನಾತೀತವಾದುದು. ಕುಟುಂಬಸಮೇತರಾಗಿ ತೀರ್ಥಕ್ಷೇತ್ರಗಳ ದರ್ಶನ, ಪ್ರಸಾದ ಸ್ವೀಕಾರ ನಮ್ಮಲ್ಲಿ ಧನ್ಯತೆಯನ್ನೂ, ಆತ್ಮಸಂತೃಪ್ತಿಯನ್ನೂ ಮೂಡಿಸುತ್ತದೆ. ಪ್ರಕೃತಿ ವೀಕ್ಷಣೆ ಹಾಗೂ ಲೋಕಾನುಭವಕ್ಕೂ ಅವಕಾಶ ಸಿಗುತ್ತದೆ.

ಅಂಚೆ ಅಥವಾ ಕೊರಿಯರ್ ಮೂಲಕ ಬರುವ ಪ್ರಸಾದಕ್ಕೆ ಆ ಮಹತ್ವ ಇರಲಾರದು. ಜೊತೆಗೆ ಆನ್‌ಲೈನ್ ಸೇವೆ
ಯಿಂದಾಗಿ, ಸಾರಿಗೆ ಇಲಾಖೆ, ಪ್ರವಾಸೋದ್ಯಮ, ಹೋಟೆಲ್‌ಗಳು, ವಸತಿ ನಿಲಯ, ಅರ್ಚಕರಿಗೂ ಅಪಾರ ನಷ್ಟವಾಗುವ ಭೀತಿ ಇದೆ. ಹೀಗಾಗಿ, ಕಟ್ಟುನಿಟ್ಟಿನ ನಿರ್ಬಂಧಗಳನ್ನು ಕಾಯ್ದುಕೊಂಡು ದೇವಾಲಯಗಳನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತ ಮಾಡುವುದು ಒಳ್ಳೆಯದು.

-ಆರ್.ಎನ್.ಪೂವಣಿ,ಉಜಿರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.