ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯದ ಪೊರೆ ಕಳಚಲಿ

Last Updated 23 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಇದೇ 26ರಂದು ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ವೀಕ್ಷಣೆಗಾಗಿ ಒಂದೆಡೆ ಖಗೋಳ ವಿಜ್ಞಾನಿಗಳು ತಯಾರಿ ಮಾಡಿಕೊಂಡು ಕುತೂಹಲದ ಕ್ಷಣಗಳಿಗಾಗಿ ಕಾಯುತ್ತಿದ್ದಾರೆ. ಇನ್ನೊಂದೆಡೆ, ಕೆಲ ದೇವಾಲಯಗಳಲ್ಲಿ ಆ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡದೆ ನಿರ್ಬಂಧ ಹೇರಲು ಸಿದ್ಧತೆ ನಡೆದಿದೆ.

ಹೀಗೆ ನಿರ್ಬಂಧ ವಿಧಿಸುವುದು ಎಷ್ಟು ಸರಿ? ಅದರ ಬದಲು, ಆ ಸಂದರ್ಭದಲ್ಲಿ ದೇವರ ದರ್ಶನದ ಜತೆಗೆ ದೂರದರ್ಶಕದ ಮೂಲಕ ಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡುವ ಔದಾರ್ಯವನ್ನು ದೇವಾಲಯಗಳು ತೋರಬೇಕಿದೆ. ಈ ಮೂಲಕ ಮೌಢ್ಯದ ಪೊರೆ ಕಳಚಿ ಜನರಲ್ಲಿ ಜಾಗೃತಿ, ವೈಚಾರಿಕ ಮನೋಭಾವ ಮೂಡಿಸಲು ನಮ್ಮ ಶ್ರದ್ಧಾ ಕೇಂದ್ರಗಳು ಶ್ರಮಿಸಿದಂತೆ ಆಗುತ್ತದೆ.

ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT