ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪಕ್ಷಾತೀತ ಪ್ರಶಂಸೆಗೆ ಅರ್ಹರು

Last Updated 2 ಮೇ 2021, 19:45 IST
ಅಕ್ಷರ ಗಾತ್ರ

ಚುನಾವಣೆಯನ್ನು ದಿಟ್ಟವಾಗಿ ಎದುರಿಸುವುದು ಹೇಗೆ ಎಂಬುದನ್ನು ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ತಮ್ಮ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವ ಧೀರರೇ ದೇಶದಲ್ಲಿ ಇಲ್ಲ ಎಂದುಕೊಂಡಿದ್ದ ‘ಚುನಾವಣಾ-ಚತುರ’ ಜೋಡಿಗೆ ಸೋಲು ಉಣಿಸಿದ್ದಾರೆ. 200ಕ್ಕೂ ಅಧಿಕ ಸ್ಥಾನಗಳನ್ನು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ತಂದುಕೊಟ್ಟು, ಹೆಣ್ಣುಮಕ್ಕಳು ಸಬಲರು ಎಂಬುದನ್ನು ಇಂದಿರಾ ಗಾಂಧಿಯವರ ನಂತರ ಸಮರ್ಥವಾಗಿ ತೋರಿಸಿಕೊಟ್ಟ ನಾಯಕಿಯಾಗಿದ್ದಾರೆ. ಬಹಳ ಮುಖ್ಯವಾಗಿ, ಈ ನಾಯಕಿಯ ಪಾದರಸದಂತಹ ಗುಣ ಮತ್ತು ಸರಳವಾದ ವ್ಯಕ್ತಿತ್ವವು ಪಕ್ಷಾತೀತವಾದ ಪ್ರಶಂಸೆ ಪಡೆಯಲು ಯೋಗ್ಯವಾದುದು.

ರವಿಚಂದ್ರ ಎಂ.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT