ಶನಿವಾರ, ಅಕ್ಟೋಬರ್ 1, 2022
20 °C

ವಾಚಕರ ವಾಣಿ: ರಾಷ್ಟ್ರಧ್ವಜ- ಅರಿವು ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕೋರಿದೆ. ಎಲ್ಲರಿಗೂ ರಾಷ್ಟ್ರಧ್ವಜ ಸುಲಭವಾಗಿ ಲಭ್ಯವಾಗುವಂತೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೆ ಹಾರಾಟದ ನಿಯಮಾವಳಿಗಳಿಗೆ ಸಹ ತಿದ್ದುಪಡಿ ತರಲಾಗಿದೆ. ಈ ಸಮಯದಲ್ಲಿ ರಾಷ್ಟ್ರಧ್ವಜದಲ್ಲಿನ ಕೇಸರಿ, ಬಿಳಿ, ಹಸಿರು ಬಣ್ಣಗಳ ಬಗ್ಗೆ, ಧ್ವಜದ ಮಧ್ಯದಲ್ಲಿ ಇರುವ ಅಶೋಕ ಚಕ್ರದ ಬಗ್ಗೆ ದಿನಪತ್ರಿಕೆಗಳು, ವಿವಿಧ ದೃಶ್ಯಮಾಧ್ಯಮಗಳ ಜೊತೆಗೆ ಭಿತ್ತಿಪತ್ರಗಳ ಮುಖೇನ ಸಹ ಅಗತ್ಯ ತಿಳಿವಳಿಕೆ ನೀಡುವುದು ಹೆಚ್ಚು ಸೂಕ್ತ.

-ಕೆ.ಪ್ರಭಾಕರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು