ಬುಧವಾರ, ಅಕ್ಟೋಬರ್ 5, 2022
27 °C

ವಾಚಕರ ವಾಣಿ | ರಾಷ್ಟ್ರಧ್ವಜ: ವಿಲೇವಾರಿ ಸೂಕ್ತ ರೀತಿಯಲ್ಲಿ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಒಂದು ಕೋಟಿ ರಾಷ್ಟ್ರಧ್ವಜಗಳನ್ನು ಮನೆ ಮನೆಗಳಲ್ಲಿ ಹಾರಾಟ ಮಾಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇತರ ಮಂತ್ರಿಗಳು, ಶಾಸಕರು, ಪ್ರಮುಖ ಕಾರ್ಯಕರ್ತರು ಇದೇ ಉತ್ಸಾಹ ತೋರುತ್ತಿದ್ದಾರೆ. ಈ ಉತ್ಸಾಹ ಇಡೀ ದೇಶದಲ್ಲಿ ಕಾಣುತ್ತಿದೆ. ಆಗಸ್ಟ್ 15ರಂದು ಈ ರಾಷ್ಟ್ರಧ್ವಜಗಳು ದೇಶದ ತುಂಬಾ ಹಾರಾಟ ಕಂಡ ಮೇಲೆ, ಅವುಗಳ ವಿಲೇವಾರಿ ಹೇಗೆ? ಚುನಾವಣಾ ಸಾಮಗ್ರಿಗಳು ಪ್ರಚಾರ ಸಭೆ ಮುಗಿದ ಮೇಲೆ, ಹಾದಿ ಬೀದಿ ಕಸ ಆಗುವುದನ್ನು ನಾವು ಕಂಡಿದ್ದೇವೆ.

ಉತ್ಸವ ಮುಗಿದ ಮೇಲೆ ಚುನಾವಣಾ ಸಾಮಗ್ರಿಯಂತೆ, ರಾಷ್ಟ್ರಧ್ವಜಗಳನ್ನೂ ಎಲ್ಲೆಂದರಲ್ಲಿ ಬಿಸಾಡಿದರೆ ಹೇಗೆ? ರಾಜ್ಯ ಮತ್ತು ರಾಷ್ಟ್ರದಲ್ಲಿ ಇದರ ಜವಾಬ್ದಾರಿಯನ್ನು ಯಾರು ಹೊತ್ತಿದ್ದಾರೆ? ಬಳಸಿದ ಮೇಲೆ ರಾಷ್ಟ್ರಧ್ವಜಗಳ ಗೌರವ ಹಾಳಾಗದಂತೆ ಅವುಗಳನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಲಿ.

-ತಾ.ಸಿ.ತಿಮ್ಮಯ್ಯ, ಬೆಂಗಳೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು