ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ಕರ್ನಾಟಕ ಯುವರತ್ನ’ ಪ್ರಶಸ್ತಿ ನೀಡಿ

ವಾಚಕರ ವಾಣಿ
Last Updated 3 ನವೆಂಬರ್ 2021, 22:15 IST
ಅಕ್ಷರ ಗಾತ್ರ

ಯುವಜನರಿಗೆ ಸ್ಫೂರ್ತಿಯಾಗಿದ್ದ ಪುನೀತ್ ರಾಜ್‌ಕುಮಾರ್ ಭೌತಿಕವಾಗಿ ಕಣ್ಮರೆಯಾಗಿದ್ದಾರೆ. ಆದರೆ ತಮ್ಮ ಸಮಾಜಮುಖಿ ಕೆಲಸಗಳಿಂದ, ಅಭಿನಯ, ನೃತ್ಯ, ಗಾಯನ, ವ್ಯಾಯಾಮ, ಸಿನಿಮಾ ನಿರ್ಮಾಣ, ಆಹಾರಸೇವನೆಯ ಶಿಸ್ತಿನಿಂದಾಗಿ ಕೋಟ್ಯಂತರ ಯುವಕರ ಪಾಲಿನ ಆದರ್ಶವಾಗಿದ್ದಾರೆ. ಅನಾಥಾಶ್ರಮ, ವೃದ್ಧಾಶ್ರಮ, ಶಾಲಾ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತು ಮತ್ತು ಸರ್ಕಾರದ ಸುಧಾರಣಾ ಕಾರ್ಯಕ್ರಮಗಳ ರಾಯಭಾರಿಯಾಗಿ ಆಡಳಿತ ವ್ಯವಸ್ಥೆಗೆ ಬಲ ತುಂಬಿದ್ದರು.

ಕರ್ನಾಟಕದ ನೆಲ, ಜಲ ವನ್ಯಜೀವಿ ವೈವಿಧ್ಯ ಮತ್ತು ಸಂರಕ್ಷಣೆಯ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಜನರಲ್ಲಿ ಪರಿಸರ ಆಸಕ್ತಿ ಮೂಡಿಸಲು ವಿಶೇಷ ಪ್ರಯತ್ನ ನಡೆಸಿದ್ದರು. ಸದಭಿರುಚಿಯ ಚಿತ್ರಗಳಲ್ಲಿ ನಟಿಸುತ್ತಾ ಅಭಿನಯದಲ್ಲಿ ಮಾಗುತ್ತ, ಕಲಿಯುತ್ತಾ ಕನ್ನಡ ಚಿತ್ರ ಜಗತ್ತಿಗೆ ಹೊಸ ಸಾಧ್ಯತೆಗಳನ್ನು ಪರಿಚಯಿಸುವ ಉತ್ಕಟ ಅಪೇಕ್ಷೆ ಹೊಂದಿದ್ದ ಪುನೀತ್ ಕನ್ನಡ ಸಿನಿಮಾಗಳ ಮಾರುಕಟ್ಟೆಯನ್ನು ಓಟಿಟಿ ವೇದಿಕೆಗೂ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಅಂತಿಮಯಾತ್ರೆಯನ್ನು ಅತ್ಯಂತ ಶಾಂತಿಯುತವಾಗಿ, ಗೌರವಯುತವಾಗಿ ನಡೆಸಿಕೊಟ್ಟ ಕರ್ನಾಟಕ ಸರ್ಕಾರವು ಯುವಜನರಿಗೆ ಸ್ಫೂರ್ತಿ ತುಂಬಲು, ಅವರ ಕೆಲಸಗಳನ್ನು ಗುರುತಿಸಲು ಪುನೀತ್ ಹೆಸರಿನಲ್ಲಿ ‘ಕರ್ನಾಟಕ ಯುವರತ್ನ’ ಪ್ರಶಸ್ತಿಯನ್ನು ಸ್ಥಾಪಿಸಬೇಕು.

ಗುರುರಾಜ್ ಎಸ್. ದಾವಣಗೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT