ಬುಧವಾರ, ನವೆಂಬರ್ 30, 2022
17 °C

ವಾಚಕರ ವಾಣಿ: ಜ್ವಲಂತ ಸಮಸ್ಯೆ ಚರ್ಚೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲ ಭಾರತ ಎಂಬತ್ತಾರನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತೆಗಳು ಇದೀಗ ಆರಂಭವಾಗಿವೆ. ಎಂಬತ್ತೈದನೇ ಸಮ್ಮೇಳನ ಜರುಗಿದ ನಂತರ ನಮ್ಮ ನಾಡು ಅನೇಕ ಸ್ಥಿತ್ಯಂತರಗಳನ್ನು ಕಂಡಿದೆ. ಬಹಳ ಮುಖ್ಯವಾಗಿ ರಾಜಧಾನಿ ಬೆಂಗಳೂರು ನಗರವೇ ಮಳೆಯ ಅವಾಂತರಕ್ಕೆ ಸಿಲುಕಿ ಜನಸಾಮಾನ್ಯರ ಜೀವನ ತುಂಬ ತೊಂದರೆಗೊಳಗಾಯಿತು. ನಾಡಿನಾದ್ಯಂತ ರೈತರು ಕಷ್ಟನಷ್ಟ ಅನುಭವಿಸುವಂತಾಯಿತು. ಕನ್ನಡ ನಾಡಿನ ಬಹು ದೊಡ್ಡ ಮೌಲ್ಯವಾದ ಧಾರ್ಮಿಕ ಸಹಿಷ್ಣುತೆಗೆ ಸಂಕಷ್ಟವೂ ಎದುರಾಯಿತು.

ಹೀಗೆ ನಮ್ಮ ನಾಡಿನ ಅನೇಕ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವಿಚಾರ ಸಂಕಿರಣಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಬೇಕು. ಈ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ನಮ್ಮ ಲೇಖಕರು ಸಹ ಸಂಶೋಧನಾತ್ಮಕ ಪುಸ್ತಕಗಳನ್ನು ಬರೆದು ಪ್ರಕಟಿಸಬೇಕು. ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರುವ, ಪರಸ್ಪರ ಸ್ನೇಹ, ವಿಶ್ವಾಸ ಗಳಿಸುವ ನಮ್ಮ ಸಾಹಿತ್ಯ ಸಮ್ಮೇಳನಗಳು ನಾಡಿನ ಜ್ವಲಂತ ಸಮಸ್ಯೆಗಳನ್ನು ಸಹ ಚರ್ಚಿಸಿ ಅರಿವು ಪಡೆಯುವಂತಾಗಬೇಕು. ಅದೇ ನಿಜಕ್ಕೂ ಸಾಹಿತ್ಯ ಸಮ್ಮೇಳನದ ಸಾರ್ಥಕ್ಯವಾಗಬೇಕು.

- ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು